ಜಿಲ್ಲೆ

ಕಾಯ್ದೆಯಂತೆ ದವಸ-ಧಾನ್ಯ ಖರೀದಿಸಿ

ಹೂವಿನಡಹಗಲಿ:ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಾಯ್ದೆ ಪ್ರಕಾರ, ಟೆಂಡರ್ ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿ ಶಿರಸ್ತೇದಾರ್ ಸಲೀಂ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ರೈತರಿಂದ ದವಸ ಧಾನ್ಯ ಖರೀದಿಸಬೇಕು. ದಲ್ಲಾಳಿಳು ತೂಕ, ಹಣ ಪಾವತಿ ಸಂದರ್ಭದಲ್ಲಿ ಯಾವುದೇ ರೀತಿಯ ಭತ್ಯೆ ಕೇಳಬಾರದು. ಒಂದು ಕಿಂಟಾಲ್ ಧಾನ್ಯಕ್ಕೆ 3 ರಿಂದ 5 ಕೆಜಿ ತೂಕ ಕಡಿತಗೊಳಿಸುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈ ರೀತಿಯ ಚಟುವಟಿಕೆಗಳನ್ನು ನಡೆಸಕೂಡದು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಶಿವರಾಜ ಮಾತನಾಡಿ, ರೈತರಿಂದ ಧಾನ್ಯ ಖರೀದಿಸುವ ವ್ಯಾಪಾರಿಗಳ ಬಳಿ ನಿಗದಿತ ಮಾಪನವಿರಬೇಕು ಎಂದರು. ಉಪಾಧ್ಯಕ್ಷರಾದ ವಿಠಲ್ ನಾಯ್ಕ, ವಿ.ಬಿ.ಚನ್ನಬಸಪ್ಪ, ಸಂಘಟನಾ ಕಾರ್ಯದರ್ಶಿ ಗಿರೀಶ್‌ನಾಯ್ಕ, ಸದಸ್ಯರಾದ ಬಸವರಾಜ, ದರ್ಗಾನಾಯ್ಕ, ದಾವಲ್‌ಸಾಬ್, ಈರಣ್ಣ ಇತರರಿದ್ದರು.