ಸಾಗರದಲ್ಲಿ ವಕ್ಫೃ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಾ. ಎಂ.ಎಸ್.ಎ ಅಬ್ದುಲ್ ರಶೀದ್ ಝೈನಿ ಸಖಾಫಿ, ಅಬ್ದುಲ್ ಅಬು ತಾಲಿಬ್ ರಹ್ಮಾನಿ ಸಾಬ್, ಸೈಯದ್ ತನ್ವೀರ್ ಹಾಶ್ಮಿ ಸಾಬ್, ಮಹ್ಮದ್ ಹುಸೇನ್ ಆಸ್ೀ ಖಾದ್ರಿ, ಅಬ್ದುಲ್ ಹುನ್ನಾನ್ ಇತರರಿದ್ದರು. 
ಜಿಲ್ಲೆ

ಕಾಯ್ದೆ ತಿದ್ದುಪಡಿ ವಿರೋಧಿಸಿ ಸಭೆ

ಸಾಗರ: ವಕ್ಫೃ್ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಶೋಷಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಹಿಂದು ಮುಸ್ಲಿಂ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುವ ಹುನ್ನಾರ ಮಾಡಲಾಗುತ್ತಿದೆ ಎಂದು ಡಾ. ಎಂ.ಎಸ್.ಎ ಅಬ್ದುಲ್ ರಶೀದ್ ಝೈನಿ ಸಖಾಫಿ ದೂರಿದರು.

ಸಾಗರದ ಗಾಂಧಿ ಮೈದಾನದ ನಗರಸಭೆ ರಂಗಮಂದಿರದಲ್ಲಿ ಸೋಮವಾರ ಮಲೆನಾಡು ಮುಸ್ಲಿಂ ಒಕ್ಕೂಟದಿಂದ ಆಯೋಜಿಸಿದ್ದ ವಕ್ಫೃ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಭಾರತ ಅತ್ಯಂತ ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಆದರೆ ಕೆಲವರು ವಕ್ಫೃ್ ಹೆಸರಿನಲ್ಲಿ ಸಮುದಾಯವನ್ನು ವಿಭಜಿಸಿ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ. ದೇಶವಾಸಿಗಳಿಗೆ ಮುಸ್ಲಿಂ ಸಮುದಾಯದಿಂದ ಯಾವುದೇ ತೊಂದರೆ ಇಲ್ಲ ಎನ್ನುವ ಅರಿವಾಗಿದೆ. ಆದರೆ ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗದೆ ಹೊಸ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದರು.

ಸುಮಾರು 800 ವರ್ಷಗಳ ಹಿಂದಿನ ವಕ್ಫೃ್ ದಾಖಲೆಯನ್ನು ಹುಡುಕುವುದು ಹೇಗೆ? ಹಿಂದೆ ಕಂಪ್ಯೂಟರ್ ಸೇರಿ ಯಾವುದೇ ಡಿಜಿಟಲೀಕರಣ ಇರಲಿಲ್ಲ. ಸರ್ಕಾರ ಮತ್ತು ಮುಸ್ಲಿಂ ಸಮುದಾಯದ ನಡುವಿನ ವಕ್ಫ್ ಆಸ್ತಿ ಸಮಸ್ಯೆ ಬಗೆಹರಿಸುವ ಹೊಣೆಗಾರಿಕೆಯನ್ನು ಜಿಲ್ಲಾಧಿಕಾರಿಗೆ ನೀಡಿರುವ ಕಾನೂನು ಅವೈಜ್ಞಾನಿಕ. ಕೇಂದ್ರ ಸರ್ಕಾರ ತಕ್ಷಣ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಮೌಲಾನಾ ಅಬ್ದುಲ್ ಅಬು ತಾಲಿಬ್ ರಹ್ಮಾನಿ ಸಾಬ್, ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ ಸಾಬ್, ಮಹ್ಮದ್ ಹುಸೇನ್ ಆಸ್ೀ ಖಾದ್ರಿ, ಅಬ್ದುಲ್ ಹುನ್ನಾನ್, ಮೌಲಾನಾ ಮಹಮದ್ ಅಬು, ಜಿ.ಟಿ.ಸತ್ಯನಾರಾಯಣ, ಹಾಜಿ ಮಹ್ಮದ್, ಫಯಾಜ್, ಮೌಲಾನಾ ಸೈಯದ್ ತೌಫಿಕ್ ಖಾಸಿಂ, ನೌಫಲ್ ವಿಟ್ಲ ಇತರರಿದ್ದರು.

ವಕ್ಫೃ್ ಆಸ್ತಿ ಎಂದರೆ ದೇವರ ಹೆಸರಿನಲ್ಲಿ ನಿರ್ಮಾಣವಾಗಿದ್ದು. ಇದು ಮುಸ್ಲಿಂ ಸಮಾಜದ ವೈಯಕ್ತಿಕ ಆಸ್ತಿಯಲ್ಲ. ಇದು ಸರ್ಕಾರದ, ಸಮುದಾಯದ ಎಲ್ಲರ ಆಸ್ತಿ. ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ದೇವರ ಹೆಸರಿನಲ್ಲಿ ಹಿಂದಿನಿಂದಲೂ ಆಸ್ತಿ ರಕ್ಷಿಸಿಕೊಂಡು ಬರಲಾಗುತ್ತಿದೆ. ವಕ್ಫೃ್ ಆಸ್ತಿ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ. ಆದರೆ ಕೇಂದ್ರ ಸರ್ಕಾರದ ಕೆಲವರು ವಕ್ಫೃ್ ಆಸ್ತಿ ಕಾಯ್ದೆ ತಿದ್ದುಪಡಿ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ.

ಸುಧೀರ್‌ಕುಮಾರ್ ಮುರೊಳ್ಳಿ, ವಕೀಲ