ಜಿಲ್ಲೆ

ಕಾಯಕವೇ ಕೈಲಾಸಕ್ಕೆ ಶ್ರೀ ಸಿದ್ದರಾಮ ಮಾದರಿ

ಕಲಬುರಗಿ: ಬಸವಾದಿ ಶರಣರ ೧೨ನೇ ಶತಮಾನದ ಶರಣ ಕ್ರಾಂತಿಯಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ವಚನಗಳ ಜತೆಗೆ ಕಾಯಕ ಜೀವಿಗಳಾಗಿ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟಿಬದ್ಧರಾಗಿ ಸ್ವಯಂ ಕಾಯಕಯೋಗಿ ಆಗಿದ್ದರು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು. ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸೊಲ್ಲಾಪುರದಲ್ಲಿ ಜನಿಸಿ ಬಡವರು, ಮಹಿಳೆಯರಿಗೆ ಸಮಾನತೆಯನ್ನು ಬೋಧಿಸಿದರು. ಅದನ್ನು ಪ್ರಸ್ತುತ ರಾಜ್ಯ ಸರ್ಕಾರವೂ ಪಾಲಿಸುತ್ತಿದ್ದು, ಸ್ತಿçà ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಎಸ್ಸಿಪಿ, ಟಿಎಸ್‌ಪಿ ಅನುದಾನ ಸಮರ್ಪಕ ತಲುಪಿಸಲಾಗುತ್ತಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಸುನೀಲ್ ವಲ್ಯಾಪುರೆ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಸಿದ್ದರಾಮೇಶ್ವರರ ಜಯಂತಿ ಸರ್ಕಾರದಿಂದ ಆಚರಣೆಗೆ ಚಾಲನೆ ನೀಡಿದರು. ಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಕ್ರಾAತಿ ಒಂದೇ ದಿನ ಜಯಂತಿ ಆಚರಣೆಯಿಂದ ಅದ್ದೂರಿ ಆಚರಣೆಗೆ ತೊಡಕಾಗುತ್ತಿದೆ. ಜ.೧ರಿಂದ ೧೪ರವರೆಗೆ ತಾಲೂಕುಗಳಲ್ಲಿ ಪ್ರತ್ಯೇಕ ದಿನ ಆಚರಿಸಿದರೆ ವಿಜೃಂಭಣೆಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಮುಖಂಡರು ಚಿಂತನೆ ನಡೆಸಬೇಕು ಎಂದರು. ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸೊಲ್ಲಾಪುರದಲ್ಲಿ ನೀರಿನ ಭವಣೆ ನೀಗಿಸಲು ಕೆರೆ ಕಟ್ಟೆ ನಿರ್ಮಿಸಿ, ಜನರಿಗೆ ಅನುಕೂಲ ಕಲ್ಪಿಸಿದರು. ಬೋವಿ, ವಡ್ಡರ ಸಮಾಜಕ್ಕೆ ಶ್ರೀಮಂತ ಪರಂಪರೆ ಇದೆ. ಶ್ರಮ ಜೀವಿಗಳ ಈ ಸಮಾಜಕ್ಕೆ ಸಕಲ ಸರ್ಕಾರಿ ಸೌಲಭ್ಯ ಒದಗಿಸಲಾಗುವುದು ಎಂದರು. ಚಿಣಮಗೇರಿಯ ಶ್ರೀ ವೀರಮಹಾಂತ ಶಿವಾಚಾರ್ಯರರು ಮಾತನಾಡಿ, ಭೋವಿ ಸಮಾಜದಲ್ಲಿ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿದರೆÀ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು. ಪ್ರಾಧ್ಯಾಪಕ ಡಾ.ಗಿರೀಶ ಉಪನ್ಯಾಸ ನೀಡಿ, ಕರ್ಮಯೋಗಿ ಸಿದ್ಧರಾಮೇಶ್ವರರು ೬೮೦೦ ವಚನ ಬರೆದಿದ್ದರು. ಶ್ರಮಜೀವಿಗಳಾದ ಭೋವಿ ಸಮುದಾಯವರು ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು. ಶಿಕ್ಷಣ ಸರ್ವ ಸಮಸ್ಯೆಗಳಿಗೂ ರಾಮಬಾಣ ಎಂದು ಹೇಳಿದರು. ಶಾಸಕ ಬಸವರಾಜ ಮತ್ತಿಮಡು, ಭೋವಿ ವಡ್ಡರ ಸಮಾಜ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳುಂಕೆ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಡಿಸಿಪಿ ಪ್ರವಿಣ್ ನಾಯಕ್ , ಜಿಪಂ ಪಿ.ಡಿ. ಜಗದೇವಪ್ಪ, ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ರಾಜು ಗುತ್ತೇದಾರ, ಮಲ್ಲಿಕಾರ್ಜುನ ಕುಸ್ತಿ, ತಿಪ್ಪಣ್ಣ ಒಡೆಯರಾಜ, ಲಿಂಗಣ್ಣ ದೇವಕರ, ಸಂಜು ಮಂಜಾಳಕರ್, ಜಿ.ಶಿವಶಂಕರ, ರಾಘವೇಂದ್ರ ಲಸ್ಕರಿ, ರವಿಚಂದ್ರ ಗುತ್ತೇದಾರ, ರಾಜು ಸುರಪುರಕರ್, ಲಕ್ಷö್ಮಣ ಕೋಡ್ಲಿ, ಶ್ರೀಕೃಷ್ಣ ಕುಶಾಳಕರ, ರಮೇಶ ಯಾಳಗಿ, ನಾಗೇಶ ಗೊಬ್ಬುರ, ಮಲ್ಲಿಕಾರ್ಜುನ ಚೌದ್ರಿ ಇತರರಿದ್ದರು.

ಸಕಲ ಪ್ರಾಣಿ ಪಕ್ಷಿಗಳ ಒಳಿತಿಗಾಗಿ ಶ್ರಮಿಸಿ, ಕೆರೆಗಳನ್ನು ಕಟ್ಟಿದ ಶ್ರೇಷ್ಠ ಶರಣ ಶಿವಯೋಗಿ ಸಿದ್ಧರಾಮೇಶ್ವರರು. ಶ್ರೀಶೈಲವಾಸಿ ಭಗವಂತ ಮಲ್ಲಿಕಾರ್ಜುನನನ್ನು ತನ್ನ ಕಠೋರ ಭಕ್ತಿಯಿಂದ ಒಲಿಸಿಕೊಂಡವರು. ದೇಶದ ಪ್ರಮುಖ ಐತಿಹಾಸಿಕ ಕಟ್ಟಡಗಳ ನಿರ್ಮಾಣಕ್ಕೆ ಬೋವಿ ಸಮಾಜದ ಕೊಡುಗೆ ಅಪಾರ. ಯಂತ್ರಗಳೇ ಇಲ್ಲದ ಕಾಲದಲ್ಲಿ ಬೃಹತ್ ಸೇತುವೆ, ಮಂದಿರ, ರಸ್ತೆ ನಿರ್ಮಿಸಿದ್ದು, ಭೋವಿ ಸಮಾಜ. | ಬಸವರಾಜ ಮತ್ತಿಮಡು, ಶಾಸಕ