ನುಗ್ಗೇಹಳ್ಳಿ: ಮನುಷ್ಯನ ಬದುಕು ಕಾಯಕದಿಂದ ಮಾತ್ರ ಉಜ್ವಲಗೊಳ್ಳಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದಲ್ಲಿ ಆಯೋಜಿಸಿದ್ದ ಶ್ರೀ ಕಲ್ಯಾಣಿ ಆಂಜನೇಯಸ್ವಾಮಿ ನೂತನ ದೇಗುಲದ ಉತ್ಸವ ಮೂರ್ತಿ ಚರ ವಿಗ್ರಹ ಪ್ರತಿಷ್ಠಾಪನೆಯ ಕುಂಭಾಭಿಷೇಕ ಮಹೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರಮವಹಿಸಿ ಸುರಿಸಿ ದುಡಿಯದಿದ್ದರೆ ಯಶಸ್ಸು ಸಿಗುವುದಿಲ್ಲ. ಶ್ರಮಪಟ್ಟು ದುಡಿದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆ. ಉತ್ತಮ ನಡೆ-ನುಡಿಗಳು ಜೀವನ ವಿಕಾಸಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಲ್ಲಿಯ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೂರನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ಹೋಬಳಿ ಜನತೆಗೆ ಅಭಿನಂದನೆ ಸಲ್ಲಿಸುವೆ ಎಂದರು.
ತೋಟಿ ನಾಗರಾಜ್, ದೊರೆಸ್ವಾಮಿ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎನ್.ಡಿ.ಶಿವಪ್ಪ, ಪಂಡಿತ್ ಬಾಬು, ಎನ್.ಎಸ್. ಚಂದ್ರಶೇಖರ್, ರವೀಶಾಚಾರ್, ಎನ್.ಎಸ್.ಗಿರೀಶ್, ರುದ್ರಸ್ವಾಮಿ, ಸುರೇಶ್, ಚಂದ್ರು ಯಾದವ್, ಎನ್.ಎಸ್.ಮಂಜುನಾಥ್‌ಸ್ವಾಮಿ, ಹೊನ್ನೇಗೌಡ, ಹೋಟೆಲ್ ರಾಜಣ್ಣ, ಪ್ರಸನ್ನ ಕೇಶವಚಾರ್ ಹಾಜರಿದ್ದರು.