ಕುಡಚಿ: ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕೆಂದು ಬಿ.ಶಂಕರಾನಂದ ಕಾಲೇಜ್ ಪ್ರಾಚಾರ್ಯ ಎ.ಎಸ್.ಕಾಂಬಳೆ ತಿಳಿಸಿದರು.
ಸುಟ್ಟಟ್ಟಿ ಗ್ರಾಮದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಡಾ.ಬಾಬಾಸಾಹೇಬ ಅಂಬೇಡ್ಕರ್ ಶಿಕ್ಷಣ ಸಂಸ್ಥೆ, ಬಿ.ಶಂಕರಾನಂದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ೭ ದಿನಗಳ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳು ಸ್ವಚ್ಛವಾದರೆ, ದೇಶ ಸ್ವಚ್ಛವಾಗುತ್ತದೆ. ಆದ್ದರಿಂದ ಸೇವಾ ಮನೋಭಾವದಿಂದ ಕಾಯಕ ಮಾಡಿ, ನಾಯಕತ್ವ ಗುಣ ಬೆಳೆಸಿಕೊಳ್ಳಿ ಎಂದರು.
ಅಭಿನವ ಕಲ್ಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುರಾರಿ ಬಾನೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪ್ರಭಾರಿ ಸಂಯೋಜನಾಧಿಕಾರಿ ಪ್ರೊ.ಶಂಕರ ನಿಂಗನೂರ, ಶಿಬಿರಾಧಿಕಾರಿ ಪ್ರೊ.ಆರ್.ಎಂ.ಮಹೇಶವಾಡಗಿ, ಅನಿಲ ದೇಸಾಯಿ, ಶಿವಾನಂದ ಹೆಗಡೆ, ವಿಠ್ಠಲ ಕೂಗೆ, ಬಾಬು ನಿಂಗನೂರೆ, ಅಜಿತ ಹೆಗಡೆ, ಕಲ್ಮೇಶ್ವರ ತಿಗಡಿ, ಸಿದ್ದಪ್ಪ ಕಿಲಾರೆ, ಸುಬಾಷ ಮಾನೆ, ಕಲ್ಮೇಶ್ವರ ಬಾನೆ ಇತರರಿದ್ದರು.