ಕೊಪ್ಪಳ: ಕಾಯಕದಲ್ಲಿ ಕೈಲಾಸ ಕಂಡ ಮಹಾನ್ ಶರಣ ನೂಲಿಯ ಚಂದಯ್ಯ ಎಂದು ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಶರಣರು ವಚನಗಳ ಮೂಲಕ 12ನೇ ಶತಮಾನದ ಕಲ್ಯಾಣ ಕ್ರಾಂತಿಗೆ ಶ್ರಮಿಸಿದ್ದಾರೆ. ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೇಲು ಎಂದು ಸಾರಿದ್ದಾರೆ. ತನು, ಮನ, ಧನದಿಂದ ವಚನಸಾಹಿತ್ಯಕ್ಕೆ ಶ್ರಮಿಸಿದ್ದಾರೆ. ಚಂದಯ್ಯ ತಮ್ಮ ನೂಲಿ ನೇಯುವಿಕೆಯಿಂದ ಬಂದ ದುಡ್ಡಿನಿಂದ ಲಿಂಗ -ಜಂಗಮರಿಗೆ ಪ್ರಸಾದ ಮಾಡಿ ಕಾಯಕ ಮೆರೆದವರು. ಅವರ ತತ್ವ-ಆದರ್ಶಗಳನ್ನು ನಾವೆಲ್ಲ ಪಾಲಸೋಣ ಎಂದರು.
ಕಾರಟಗಿ ಶಿಕ್ಷಕ ಜಗದೀಶ ಭಜಂತ್ರಿ ವಿಶೇಷ ಉಪನ್ಯಾಸ ನೀಡಿದರು.
ನಗರಸಭೆ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಗ್ರೇಡ್-2 ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಕಂಬಣ್ಣ ಭಜಂತ್ರಿ, ಬಸವರಾಜ ಓಜಿನಳ್ಳಿ, ಗ್ಯಾನಪ್ಪ ಭಜಂತ್ರಿ, ಲಕ್ಷ್ಮಣ ಭಜಂತ್ರಿ, ನಾಗರಾಜ ಭಜಂತ್ರಿ, ಲಕ್ಷ್ಮಣ ಹಾಲಳ್ಳಿ, ಭೀಮಣ್ಣ ಭಜಂತ್ರಿ, ನಿಂಗಪ್ಪ ಭಜಂತ್ರಿ, ಶಿವಕುಮಾರ ಗೊಂಡಬಾಳ ಇತರರಿದ್ದರು.