ಕುಕನೂರು ತಹಸಿಲ್ ಕಚೇರಿಯಲ್ಲಿ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಜಯಂತಿ ಗುರುವಾರ ಆಚರಿಸಲಾಯಿತು. ತಹಸೀಲ್ದಾರ್ ಎಚ್.ಪ್ರಾಣೇಶ, ಗ್ರೇಡ್-2 ತಹಸೀಲ್ದಾರ್ ಮುರಳಿಧರಾವ್ ಕುಲಕರ್ಣಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪಪಂ ಮಾಜಿ ಸದಸ್ಯ ಹನಮಂತಪ್ಪ ಹಂಪನಾಳ ಇದ್ದರು. 
ಜಿಲ್ಲೆ

ಕಾಯಕಕ್ಕೆ ಆದ್ಯತೆ ನೀಡಿದ್ದ ನುಲಿಯ ಚಂದಯ್ಯ

ಕುಕನೂರು: ಮನುಕುಲಕ್ಕೆ ಅಪಾರ ಕೊಡುಗೆ ನೀಡಿದ ನುಲಿ ಚಂದಯ್ಯ ಹಾಗೂ ನಾರಾಯಣ ಗುರುಗಳ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಚ್.ಪ್ರಾಣೇಶ ಹೇಳಿದರು.


ಪಟ್ಟಣದ ತಹಸಿಲ್ ಕಚೇರಿಯಲ್ಲಿ ನುಲಿಯ ಚಂದಯ್ಯ ಹಾಗೂ ನಾರಾಯಣ ಗುರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗುರುವಾರ ಮಾತನಾಡಿದರು. ನುಲಿ ಚಂದಯ್ಯ ಕಾಯಕದ ಮೂಲಕ ಜನರ ಜನ ಮೆಚ್ಚುಗೆ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ನಾರಾಯಣ ಗುರು ಸಮಾಜ ಸುಧಾರಣೆಗಾಗಿ ಶ್ರಮಿಸಿದ್ದಾರೆ ಎಂದರು.


ಗ್ರೇಡ್-2 ತಹಸೀಲ್ದಾರ್ ಮುರಳಿಧರಾವ್ ಕುಲಕರ್ಣಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಪಪಂ ಮಾಜಿ ಸದಸ್ಯ ಹನಮಂತಪ್ಪ ಹಂಪನಾಳ, ಪ್ರಮುಖರಾದ ವೆಂಕಟೇಶ ಈಳಗೇರ, ಹನಮಗೌಡ ಈಳಗೇರ, ಬಸವರಾಜ ಕಿತ್ತೂರ, ಕುಬೇರಪ್ಪ ಭಜಂತ್ರಿ, ಲೋಕೇಶ್ ಬೆಣಕಲ್, ಹುಲಗಪ್ಪ ಭಜಂತ್ರಿ, ಶಶಿಕುಮಾರ ಭಜಂತ್ರಿ, ನಾಗರಾಜ ಹೇರೂರು ಇತರರಿದ್ದರು.