ಭಾಲ್ಕಿ: ಬಸವಾದಿ ಶರಣರ ಸಮಕಾಲೀನ ಕುಂಬಾರ ಗುಂಡಯ್ಯ ಕಾಯಕ ನಿಷ್ಠರಾಗಿದ್ದರು. ಅವರ ಕಾರ್ಯಕ್ಷೇತ್ರ ಭಾಲ್ಕಿ ಆಗಿದೆ. ಅವರಿಂದ ಈ ಪಟ್ಟಣ ಐತಿಹಾಸಿಕ ಮಹತ್ವ ಪಡೆದಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಶುಕ್ರವಾರ ಏರ್ಪಡಿಸಿದ್ದ 279ನೇ ಮಾಸಿಕ ಶರಣ ಸಂಗಮ ಮತ್ತು ಕುಂಬಾರ ಗುಂಡಯ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕೈಲಾಸ ಬೇಡ. ಕಾಯಕವೇ ಇರಲಿ ಎಂಬುದು ಕುಂಬಾರ ಗುಂಡಯ್ಯ ಅವರ ದಿವ್ಯ ಸಂದೇಶವಾಗಿದೆ. ಇವರ ಪತ್ನಿ ಕೇತಲದೇವಿ ಅನಾಚಾರಿಗಳ ಸಂಗ ನರಕಕ್ಕೆ ಮೂಲ ಎಂದು ತಮ್ಮ ವಚನದಲ್ಲಿ ಬೋಧಿಸಿದ್ದಾರೆ ಎಂದರು.
ಕನರ್ಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ವಸಂತ ಹುಣಸನಾಳೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧಿಕಾರಿಗಳಾದ ಕ್ರಾಂತಿವೀರ ಸಿಸರ್ೆ, ಬಸವರಾಜ ಬಿರಾದಾರ, ವೈ.ಆರ್.ಇಂಗಳೆ ಅವರನ್ನು ಸನ್ಮಾನಿಸಲಾಯಿತು. ಡೋಣಗಾಪುರದ ಪೂಜ್ಯ ದೇವಮ್ಮತಾಯಿ, ನಾಟಿವೈದ್ಯ ರವಿದಾಸ ಮೆಂಗಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ, ಶಾಂತಮ್ಮ ವಾಡೆ, ಸಹದೇವ ಇತರರಿದ್ದರು.
ನಿರ್ಮಲಾ ಪ್ರಭುರಾವ ದೇವಣೆ ಭಕ್ತಿದಾಸೋಹ ಮಾಡಿದರು. ಕುಂಬಾರ ಸಮಾಜದ ಅಧ್ಯಕ್ಷ ಜಯಪ್ರಕಾಶ ಕುಂಬಾರ ಬಸವಗುರುಪೂಜೆ ನೆರವೇರಿಸಿದರು. ರಾಜು ಜುಬರೆ ಪ್ರಾರ್ಥನೆ ನಡೆಸಿಕೊಟ್ಟರು. ಯಲ್ಲನಗೌಡ ಬಾಗಲಕೋಟ, ಚನ್ನಬಸವ ವಡಗಾಂವ ಅವರಿಂದ ವಚನ ಗಾಯನ ನಡೆಯಿತು. ವೀರಣ್ಣ ಕುಂಬಾರ ನಿರೂಪಣೆ ಮಾಡಿದರು. ಶಾಂತಯ್ಯ ಸ್ವಾಮಿ ವಂದಿಸಿದರು.