ಜಿಲ್ಲೆ

ಕಾಯಕ ನಿಷ್ಠ ಸವಿತಾ ಮಹರ್ಷಿ

ಕಲಬುರಗಿ: ಕಾಯಕ ನಿಷ್ಠೆ ಹೊಂದಿದ ಸಮಾಜದ ಸವಿತಾ ಮಹರ್ಷಿಯ ಅವರಂತೆ ಕೌಶಲ ಭರಿತರಾಗಿ ಪ್ರಾಮಾಣಿಕವಾಗಿ ತತ್ವಗಳನ್ನು ಅನುಸರಿಸಿಕೊಂಡು ಸಾಗಬೇಕು ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ್ ಹೇಳಿದರು.

ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಕಾಯಕ ನಿಷ್ಠ, ಪ್ರಾಮಾಣಿಕ ಸವಿತಾ ಸಮಾಜದ ಕೊಡುಗೆ ಅಪಾರ ಇದೆ. ಮನುಷ್ಯ ಸುಂದರ ಜೀವನ, ಆರೋಗ್ಯ ಕಾಪಾಡಲು ಸವಿತಾ ಸಮಾಜ ಶ್ರಮಿಸುತ್ತಿದೆ. ಹಿಂದುಳಿದ, ಬಡತನದ ಕಾಯಕದಿಂದ ಜೀವನ ಸಾಗಿಸಿಕೊಳ್ಳಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಹಲ್ಲಹAಗರಗಾ ಸರ್ಕಾರಿ ಪ್ರೌಢ ಶಾಲೆಯ ಶ್ರೀನಿವಾಸ ನಾಲವಾರಕರ್ ಉಪನ್ಯಾಸ ನೀಡಿ, ಸವಿತಾ ಸಮಾಜದವರು ಶಿಕ್ಷಣ ಪಡೆದು, ಸಂಘಟಿತರಾಗಬೇಕು. ಸಂಘಟಿತರಾಗಬೇಕು. ಸವಿತಾ ಸಮಾಜ ಪ್ರವರ್ಗ ೨ಎ ನಿಂದ ಪ್ರವರ್ಗ ೧ ಕ್ಕೆ ಸೇರ್ಪಡಿಸಿದರೆ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ನಿಷೇಧಿತ ಪದ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸವಿತಾ ಸಮಾಜ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದೆ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದ ಸಂಗೀತಕ್ಕೆ ಸಂಬAಧಿಸಿದೆ. ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಸವಿತಾ ಸಮಾಜದ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮನAತ ಶಿವಶರಣೆಯರು ಇದ್ದರು. ಸವಿತಾ ಸಮಾಜದವರು ವೈದ್ಯ ಕ್ಷೌರಿಕ, ಡೋಲು ನಾದಸ್ವರ, ವಾದನ ಸೇರಿ ವಿವಿಧ ಕಾಯಕದಲ್ಲಿ ತೊಡಗಿದ್ದಾರೆ. ಉತ್ತಮ ಶಿಕ್ಷಣ ಪಡೆಯಲು ಸರ್ಕಾರದ ಸೌಲಭ್ಯ ಪಡೆಯಬೇಕು ಎಂದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ್ ಮಾತನಾಡಿ, ಸಂಗೀತ ಶಾಲೆ ತೆರೆಯಲು ಸರ್ಕಾರದಿಂದ ೨ ಎಕರೆ ಭೂಮಿ ಮಂಜೂರು ಮಾಡಬೇಕು. ಇತ್ತೀಚೆಗೆ ವಿವಿಧೆಡೆಯಿಂದ ಬಂದವರು ಕುಲಕಸುಬು ಕಸಿದುಕೊಳ್ಳುತ್ತಿದ್ದು, ಸಮಾಜದವರು ಜಾಗೃತಿ ಮೂಡಿಸಬೇಕು ಎಂದರು.

ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸ್ವಾಗತಿಸಿದರು. ಮಹಾಪೌರ ಯಲ್ಲಪ್ಪ ನಾಯ್ಕೋಡಿ, ಜಿಲ್ಲಾಧಿಕಾರಿ ಕಚೇರಿ ಚುನಾವಣೆ ಶಾಖೆ ತಹಸೀಲ್ದಾರ್ ಪಂಪಯ್ಯ ಇತರರಿದ್ದರು.