ಬೆಟ್ಟದಪುರ: ಸಮೀಪದ ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಮಾಕ್ಷಮ್ಮ ಮತ್ತು ಉಪಾಧ್ಯಕ್ಷರಾಗಿ ಡಿ.ಎಸ್.ಪವಿತ್ರಾ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಮಾಕ್ಷಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಎಸ್.ಪವಿತ್ರಾ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪಶುಸಂಗೋಪನ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಇಬ್ಬರ ಆಯ್ಕೆಯನ್ನು ಘೋಷಣೆ ಮಾಡಿದರು.
ಸದಸ್ಯರಾದ ಎಚ್.ಎಸ್.ಕೃಷ್ಣೇಗೌಡ, ಎಚ್.ಜೆ ಕಾವ್ಯಾ, ವೀಣಾ, ಗಿರಿಜಮ್ಮ, ನಾಗೇಗೌಡ, ಕಾಂತಮ್ಮ, ಎಚ್.ಎಸ್. ಮಂಜು, ಗೋವಿಂದಾಚಾರಿ, ಪಿಡಿಒ ಟಿ.ಆರ್. ಶಿಲ್ಪಶ್ರೀ, ಕಾರ್ಯದರ್ಶಿ ಎಸ್.ಕುಮಾರ್, ಬಿಲ್ ಕಲೆಕ್ಟರ್ ಮಹದೇವ್, ಕ್ಲರ್ಕ್ ಶಿವು, ಯೋಗಣ್ಣ, ಮುಖಂಡರಾದ ಪ್ರದೀಪ್, ನಾರಾಯಣಗೌಡ, ಗಣೇಶ್, ರಾಜಶೇಖರ್, ದೇವರಾಜ್, ಪ್ರಸನ್ನ, ದಶರಥ, ವೆಂಕಟೇಶ್, ತಮ್ಮೇಗೌಡ, ದಿವಾಕರ್, ಮೈಲಾರಿ, ಸಣ್ಣೇಗೌಡ, ರಾಜೇಗೌಡ ಹಾಜರಿದರು.