ಬಸವಕಲ್ಯಾಣ: ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಮಾಜಿ ಎಂಎಲ್ಸಿ ವಿಜಯಸಿಂಗ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅಭಿವೃದ್ಧಿ ಕಾಮಗಾರಿಗಳ ಕುರಿತು ಲೋಪಯೋಗಿ ಇಲಾಖೆ ಉಪ-ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜತೆ ಚರ್ಚಿಸಿದ ಅವರು, ನಿಗದಿತ ಅವಧಿಯಲ್ಲಿ ಕೆಲಸ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.
ಮುಖಂಡ ಶಾಂತಪ್ಪ ಪಾಟೀಲ್, ನಗರಸಭೆ ಸದಸ್ಯ ರವೀಂದ್ರಕುಮಾರ ಬೋರಾಳೆ, ಮೇಘನಾಥ ಕಾರಬಾರಿ, ಓಂ ಪ್ರಕಾಶ ಪಾಟೀಲ್, ಜೈದೀಪ ತೇಲಂಗ, ಕಾಳಿದಾಸ ಜಾಧವ್, ಝರೆಪ್ಪ ಗೌರ, ಸಂಭಾಜಿ ಮುಳೆ, ಆನಂದ ನಾಯಕ ಇತರರಿದ್ದರು.