ಸವದತ್ತಿ: ಸತ್ತಿಗೇರಿ ಏತ ನೀರಾವರಿ ಯೋಜನೆಗೆ 600 ಕೋಟಿ ರೂ. ವೆಚ್ಚವಾಗಲಿದ್ದು, 6,789 ಹೆಕ್ಟೇರ್ ಕೃಷಿ ಭೂಮಿಗೆ ನಿರುಣಿಸುವ ಯೋಜನೆ ಶ್ರೀ ಅನುಷ್ಠಾನಗೊಳಿಸಲಾಗುವುದು. ಕುಡಿಯುವ ನೀರು ಸೇರಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿಪೂಜೆ ಶ್ರೀ ನೆರವೇರಿಸಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯ ಆನಂದ ಮಾಮನಿ ಹೇಳಿದರು.
ಸ್ಥಳಿಯ ಸವಳಬಾವಿ ಓಣಿಯ ಸರ್ಕಾರಿ ಶಾಲೆ ನಂ.4 ರ 36 ಲ ರೂ.ವೆಚ್ಚದ ನೂತನ ಕೊಠಡಿಗಳ ಉದ್ಘಾಟನೆ, 48 ಲ ರೂ.ಗಳ ಹೆಚ್ಚುವರಿ ಕೊಠಡಿಗಳ ಭೂಮಿಪೂಜೆ ಹಾಗೂ ಶಂಕರಲಿಂಗ ದೇವಸ್ಥಾನ ಎದುಗಿರುವ ನಾಗದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
10 ಎಕರೆ ಜಾಗದಲ್ಲಿ 972 ನಿವೇಶನಗಳ ಪಟ್ಟಿ ತಯಾರಿಸಿ. 4 ಸ್ಲಂ ಪ್ರದೇಶದಲ್ಲಿ 472 ಫಲಾನುಭವಿ ಅಂತಿಮಗೊಳಿಸಲು ಸೂಚಿಸಲಾಗಿದೆ. 196 ಕಟ್ಟೆಯುಳ್ಳ ಇಲ್ಲಿನ ನೂತನ ಮಾರುಕಟ್ಟೆ ಶ್ರೀ ಲೋಕಾರ್ಪಣೆಗೊಳಿಸಲಾಗುವುದು. ಚುನಾವಣೆಗೆ ಯಾರು ಮತ್ತು ಎಷ್ಟು ಜನ ಸ್ಪರ್ಧಿ ಎಂಬ ಲೆಕ್ಕಾಚಾರ ಬಿಟ್ಟು ಕಾರ್ಯಕರ್ತರು ಪ ಬಲವರ್ಧನೆಗೆ ಶ್ರಮಿಸಿ. ಚುನಾವಣೆ ಪೂರ್ವಸಿದ್ಧತೆ ನಡೆಸಿ ಎಂದರು.
ಪುರಸಭೆ ಅಧ್ಯ ರಾಜಶೇಖರ ಕಾರದಗಿ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ಯಾವುದೇ ಒತ್ತಡ ಬೇಡ. ಅರ್ಹ ಫಲಾನುಭವಿಗೆ ನಿವೇಶನ ಹಂಚಿಕೆಯಾಗಬೇಕು. ೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸ್ಥಳಿಯವಾಗಿ 110 ಕೋಟಿ ರೂ. ಅನುದಾನದಲ್ಲಿ ನಿರಂತರ ಕುಡಿಯುವ ನೀರಿನ ಕಾಮಗಾರಿ ಶ್ರೀ ಪ್ರಾರಂಭವಾಗಲಿದೆ.
ರಸ್ತೆ, ಕುಡಿಯುವ ನೀರು, ಶಿಣ, ಶಾಲೆಗಳ ಅಭಿವೃದ್ಧಿ ಸೇರಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಹೆಚ್ಚಿನ ಒತ್ತು ನೀಡಿ ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದರು. ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಪುರಸಭೆ ಮಾಜಿ ಅಧ್ಯ ಶಿವಾನಂದ ಹೂಗಾರ, ತಾಪಂ ಇಒ ಯಶವಂತಕುಮಾರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಎಚ್.ಕೆ.ಕದ್ರಾಪುರ, ಮಂಜು ಪಾಚಂಗಿ, ಬಸವರಾಜ ಅರಮನಿ ಇತರರು ಇದ್ದರು.