ಯಾದಗಿರಿ: ಗ್ರಾಮೀಣ ಪ್ರದೇಶದ ಜನರ ಕುಡಿಯುವ ನೀರಿನ ಜಲಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನ ಮಾಡುವ ಹಿನ್ನಲೆಯಲ್ಲಿ ಮನರೇಗಾ ಯೋಜನೆಯಡಿ ಮಿಷನ್ ಅಮೃತ್ ಸರೋವರ ಕಾರ್ಯಕ್ರಮ ರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಅಭಿಯಂತರ ಸಿ.ಕೆ.ಮಲ್ಲಪ್ಪ ತಿಳಿಸಿದರು.
ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಮಿಷನ್ ಅಮೃತ್ ಸರೋವರ ಕಾರ್ಯಕ್ರಮದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನೈಸಗರ್ಿಕ ಸಂಪತ್ತು ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಪ್ರಾಕೃತಿಕ ಸಂಪತ್ತು ಹೆಚ್ಚು ಬೆಳೆಯಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
ಕಾಮಗಾರಿ ಅನುಷ್ಠಾನಗೊಳಿಸುವಾದ ಸಂಬಂಸಿದ ಅಕಾರಿಗಳು, ತಾಂತ್ರಿಕ ಸಹಾಯಕರು ನರೇಗಾ ಯೋಜನೆಯ ನಿಯಮನುಸಾರ ಸೂಕ್ತ ಕ್ರಿಯಾಯೋಜನೆ ತಯಾರಿಸಿ, ತಮ್ಮ ತಾಂತ್ರಿಕ ಪ್ರತಿಭೆಯಿಂದ ಬಹುಕಾಲ ಬಾಳಿಕೆ ಬರುವ ಕೆಲಸಗಳಲ್ಲಿ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಾರ್ವಜನಿಕರಿಗೆ ಉಪಯುಕ್ತವಾದ ಕಾಮಗಾರಿ ಒಂದು ಬಾರಿ ಅನುಷ್ಠಾನಗೊಳಿಸುವ ಕಾರಣ ಹೆಚ್ಚು ದಿನ ಬಾಳಿಕೆ ಬರುವಂತೆ ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು. ಇದರಿಂದ ನೀವು ಪಟ್ಟ ಶ್ರಮ ಸಹ ಸಾರ್ಥಕವಾಗುತ್ತದೆ. ಅಲ್ಲದೆ ನರೇಗಾ ನಿಯಮದಂತೆ ಶೇ.60 ಕಾಮರ್ಿಕರ ಕೂಲಿ ವೆಚ್ಚ, 40 ರಷ್ಟು ಸಾಮಗ್ರಿ ವೆಚ್ಚದಡಿ ಗ್ರಾಮೀಣ ಜನರಿಗೆ ಕೂಲಿ ಕೆಲಸ ನೀಡಬೇಕು ಎಂದರು.
ಮಳೆ ನೀರು ರಕ್ಷಣೆಗೆ ಅಮೃತ್ ಸರೋವರ ಕಾರ್ಯಕ್ರಮದಡಿ ಕೆರೆ ಹೂಳೆತ್ತುವದು, ಕೆರೆ ದಡದಲ್ಲಿ ಕಲ್ಲುಗಳ ಜೋಡಣೆ, ಕೆರೆ ದಂಡೆಯ ಮೇಲೆ ಅರಣ್ಯ ಸಸಿಗಳನ್ನು ನೆಡುವದು, ಏರಿಯ ಮೇಲೆ ಪಾದಚಾರಿ ಮಾರ್ಗ ನಿಮರ್ಾಣ ಸೇರಿ ಇತರೆ ಅಗತ್ಯ ಕಾಮಗಾರಿ ಕೈಗೊಂಡು ಅಭಿವೃದ್ಧಿ ಪಡಿಸಬೇಕು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಅಕ್ಕಪಕ್ಕದ ರೈತರಿಗೆ ಅಕ ಇಳುವರಿ ಸಿಗಲಿದೆ ಎಂದು ತಿಳಿಸಿದರು.