ಯಾದಗಿರಿ: ಕಲ್ಯಾಣ ಕನರ್ಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುಮೋದನೆಗೊಂಡು ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಸಂಬಂಸಿದ ಅಕಾರಿಗಳಿಗೆ ನಿದರ್ೇಶನ ನೀಡಿದರು.
ನಗರದ ಜಿಲ್ಲಾಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಕೆಕೆಆರ್ಡಿಬಿ 2022-23ನೇ ಸಾಲಿನ ಮೆಗಾ ಮ್ಯಾಕ್ರೋ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿ ಪ್ರಾರಂಭವಾಗದೇ ಇರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತೋಟಗಾರಿಕೆ ಇಲಾಖೆಯ 2, ಲೋಕೋಪಯೋಗಿ ಇಲಾಖೆಯ 15, ಪಂಚಾಯತ ರಾಜ್ ಇಲಾಖೆಯ 33 , ಆರೋಗ್ಯ ಇಲಾಖೆಯ 2 ಸಂಬಂಸಿದಂತೆ ಒಟ್ಟು 52 ಕಾಮಗಾರಿಗಳು ಆರಂಭಗೊಳ್ಳಬೇಕಿತ್ತು. ಆದರೆ, ಇವೆಲ್ಲವೂ ಇನ್ನೂ ಟೆಂಡರ್ ಹಂತದಲ್ಲೇ ಇವೆ. ಇಷ್ಟೊಂದು ವಿಳಂಬವಾದರೆ ಅಭಿವೃದ್ಧಿಯ ಮೇಲೆ ಹೊಡೆತ ಬೀಳಲಿದೆ. ಕೂಡಲೇ ಎಲ್ಲ ಕಾಮಗಾರಿಗಳನ್ನು ಆದ್ಯತೆ ಮೇಲೆ ಆರಂಭಿಸಬೇಕು. ಈ ಬಗ್ಗೆ ಅಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಇದಲ್ಲದೆ ಜಿಲ್ಲಾ ಗ್ರಂಥಾಲಯದ 6, ಲೋಕೋಪಯೋಗಿ ಇಲಾಖೆಯ 15, ಹಾಗೂ ಪಂಚಾಯತ ರಾಜ್ ಇಲಾಖೆಗೆ ಸಂಬಂಸಿದಂತೆ 10 ಹೀಗೆ 31 ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ನಿಯಮಾನುಸಾರ ಪ್ರಾರಂಭಿಸಿ. ಮಂಡಳಿಯಿಂದ ಅನುಮೋದನೆಗೊಂಡ ಶಾಲಾ ಕಟ್ಟಡಗಳು, ಅಂಗನವಾಡಿ, ಆರೋಗ್ಯ ಕೇಂದ್ರಗಳ ಕಟ್ಟಡ ನಿಮರ್ಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ನಿವೇಶನದ ಸಮಸ್ಯೆ ಇದ್ದರೆ, ನಿಮ್ಮ ಮೇಲಕಾರಿಗಳನ್ನು ಸಂಪಕರ್ಿಸಬೇಕು ಎಂದರು.