ಜಿಲ್ಲೆ

ಕಾಮಗಾರಿಗಳನ್ನು ನಿರ್ದಿಷ್ಟ ಅವಧಿಯಲ್ಲಿ ಮುಗಿಸಿ- ಸಚಿವ ಕೋಟ ಸೂಚನೆ

ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಧಿಷ್ಟ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯಿಂದ 300 ಕೋಟಿ ರೂ. ವೆಚ್ಚದಲ್ಲಿ 68 ಖಾರ್ಲ್ಯಾಂಡ್ ಒಡ್ಡು ನಿರ್ಮಾಣ ಕಾಮಗಾರಿ ನಡೆಸಲು ಯೋಜಿಸಲಾಗಿದ್ದು, ಕಾರ್ಯಾದೇಶ ನೀಡಲು ವಿಳಂಬವಾಗಿದೆ. ನವೆಂಬರ್ ನಿಂದ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.
ಪಶ್ಚಿಮ ವಾಹಿನಿ ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣದ ಕಾಮಗಾರಿ ನಡೆದಿದ್ದು, 77 ಸಣ್ಣ ಅಣೆಕಟ್ಟು ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಅದರಲ್ಲಿ ಸದ್ಯ 67 ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಕೆಆರ್ ಡಿಸಿಎಲ್ ನಿಂದ ಜಿಲ್ಲೆಯಲ್ಲಿ ಒಟ್ಟು 28 ಸೇತುವೆ ಕಾಮಗಾರಿ ಮಾಡಲಾಗುತ್ತಿದ್ದು, ಅದರಲ್ಲಿ ಪ್ರಮುಖ 6 ಸೇತುವೆ 22 ಚಿಕ್ಕ ಸೇತುವೆ ಕಾಮಗಾರಿಗಳು ಸೇರಿವೆ ಕಾಮಗಾರಿಯನ್ನು 2023 ರ ಮಾರ್ಚ್ ಒಳಗಾಗಿ ಪೂರ್ಣಗೊಳಿಬೇಕು, ಇಲ್ಲವಾದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಜಿಲ್ಲಾ ಆಸ್ಪತ್ರೆ 6 ಮಹಡಿ ಕಟ್ಟಡ ನಿರ್ಮಾಣಕ್ಕಾಗಿ 150 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಆಗಸ್ಟ್ 2023 ರೊಳಗಾಗಿ ಸಂಪೂರ್ಣವಾಗಿ ಕಟ್ಟಡ ಕಾಮಗಾರಿ ಮುಕ್ತಾಯಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಇಂಜಿನಿಯರಿಂದ ವಿಂಗ್ ನ ಎಇಇ ಅವರಿಗೆ ಸೂಚಿಸಿದರು. ಸಭೆಗೆ ಬಾರದ ಇಇ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು.
ಹಾಗೂ ಪ್ರತಿ 100 ಗೋವುಗಳಿಗೆ ಬೇಕಾಗುವಂತಹ ಆಹಾರ, ನೀರು ಮತ್ತು ನಿರ್ವಹಣಾ ಸಿಬ್ಬಂಧಿಗಳ ಮಾಹಿತಿಯ ವ

ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಗೋ ಶಾಲೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ಸೆಪ್ಟೆಂಬರ್ ಪ್ರಾರಂಭದಲ್ಲಿ ಅದನ್ನು ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಪಶು ಸಂಗೋಪನಾ ಅಧಿಕಾರಿಗಳಿಗೆ ಸೂಚಿಸಿದರು. ಕಾರವಾರ, ಶಿರಸಿ,‌ ಮುಂಡಗೋಡ ಹಾಗೂ ಭಟ್ಕಳದಲ್ಲಿ ತಾಲೂಕು ಮಟ್ಟದ ಗೋ ಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ ಎಂದು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ರಾಕೇಶ ಬಾಂಗ್ಲೆ ತಿಳಿಸಿದರು.

ಶಾಸಕ ದಿನಕರ ಶೆಟ್ಟಿ, ಎಂಎಲ್‌ಸಿ ಗಣಪತಿ‌ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಪ್ರೀಯಾಂಗಾ ಎಂ ಇದ್ದರು.