ಜಿಲ್ಲೆ

ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಯಾದಗಿರಿ: ನಗರದ ಹೊರವಲಯದಲ್ಲಿನ ಮುಂಡರಗಿ ಸಮೀಪ ನಿರ್ಮಾಣ ಹಂತದಲ್ಲಿರುವ 220 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಸೋಮವಾರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಬೇಕು ಎಂದು ಜನರ ಬೇಡಿಕೆ ಇತ್ತು. ಸಧ್ಯ ಕಾಮಗಾರಿ ನಡೆಯುತ್ತಿದ್ದು, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮುಂದಾಗಬೇಕು. ಅಲ್ಲದೆ, ಕಳಪೆಯಾದರೆ ಸಹಿಸಲಾಗದು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಈ ಉಪ ಕೇಂದ್ರ ಸ್ಥಾಪನೆಯಾಗಿ ಆರಂಭಗೊಂಡರೆ ಕೊಂಕಲ್ ಹಾಗೂ ಸೈದಾಪುರದ 110 ಕೆವಿ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುತ್ತದೆ. ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ರೈತರು ಬೆಳೆದ ಬೆಳೆಗಳಿಗೆ ನೀರುಣಿಸಲು ಕೃಷಿ ಪಂಪ್ಸೆಟ್ಗಳ ಮೇಲೆ ಅವಲಂಭಿತರಾಗಿದ್ದಾರೆ. ಹೀಗಾಗಿ ಸಕಾಲದಲ್ಲಿ ವಿದ್ಯುತ್ ನೀಡಿದರೆ, ಬೆಳೆಗಳಿಗೆ ಅನಕೂಲವಾಗುತ್ತದೆ ಎಂದು ಸಲಹೆ ನೀಡಿದರು.