ಕಲಬುರಗಿ: ನಗರ ಸೇರಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕಲಬುರಗಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪರಿಶೀಲಿಸಿ, ಲೋಕೋಪಯೋಗಿ ಇಲಾಖೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಹಲವು ಕಾಮಗಾರಿ ಪೂರ್ಣಗೊಂಡಿಲ್ಲ. ಅಕ್ಷರದ ಆವಿಷ್ಕಾರಗಳು ಪೂರ್ಣಗೊಂಡಿಲ್ಲದಕ್ಕೆ ಸಿಡಿಮಿಡಿಗೊಂಡರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಎಲ್ಲ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಬೇಸಿಗೆ ಎದುರಾಗುತ್ತಿದ್ದು, ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಜೆಜೆಎಂ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಸೂಚಿಸಿದರು.
ಪಿಡಬ್ಲುö್ಯಡಿ ಇಲಾಖೆಯ ಎಇಇ ಮಾಹಿತಿ ನೀಡಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ೧೪ ಕಾಮಗಾರಿ ಪಡೆದಿದ್ದು, ಈಗಾಗಲೇ ಏಳು ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ, ಕಳುಹಿಸಲಾಗಿದೆ. ಒಂದು ಕಾಮಗಾರಿ ಬದಲಾವಣೆ ಇದ್ದು, ಕ್ರೀಡಾ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸಬೇಕಿದೆ. ಗ್ರಂಥಾಲಯ ಪೀಠೋಪಕರಣಕ್ಕೆ ಎಸ್ಟಿಮೇಟ್ ಕಳುಹಿಸಲಾಗಿದೆ ಎಂದು ತಿಳಿಸಿದರು.
ಫಿಲ್ಟರ್‌ಬೆಡ್ ಪ್ರದೇಶದಲ್ಲಿ ೨೦೨೧ ಜೂ.೨೩ರಂದು ಏಳು ಕೋಟಿ ರೂ.ನ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ ಏಕೆ ? ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಅಲ್ಪ ಕಾಮಗಾರಿ ಬಾಕಿ ಇದ್ದು, ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಉತ್ತರಿಸಿದರು. ಇದಕ್ಕೆ ಶಾಸಕ, ಎಷ್ಟು ದಿನ ಇದೇ ಕಥೆ ಹೇಳ್ತೀರಿ. ಕಾಮಗಾರಿಯೇ ಆಗಿಲ್ಲ, ನೀವು ನೋಡಿದರೆ ಸ್ವಲ್ಪ ಕಾಮಗಾರಿ ಉಳಿದಿದೆ ಎನ್ನುತ್ತೀರಿ, ಸಂಜೆ ಸ್ಥಳಕ್ಕೆ ಹೋಗೋಣ ಕಾಮಗಾರಿ ಎಷ್ಟು ಆಗಿದೆ ನೋಡೋಣ ಎಂದು ತರಾಟೆಗೆ ತೆಗೆದುಕೊಂಡರು.