ಬೈಲಹೊಂಗಲ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿ ಬೇಡಿಕೆಗಳಿಗೆ ಡಿಜಿಟಲ್ ಟಚ್ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನವನ್ನು ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳಲ್ಲಿ ಆರಂಭಿಸಲಾಗಿದೆ. ಗ್ರಾಪಂನಿಂದ ಮುಂಬರುವ ವರ್ಷದ 2025&26ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಉಳ್ಳಾಗಡ್ಡಿ ತಿಳಿಸಿದರು.
ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಯೋಜನೆಯ ಕ್ಯೂಆರ್ ಕೋಡ್ ಬಿಡುಗಡೆ ಮಾಡಿ ಮಾತನಾಡಿದರು. ಅಭಿಯಾನದಲ್ಲಿ ಸಾರ್ವಜನಿಕರು ಭಾಗವಹಿಸಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಗ್ರಾಪಂ ಮಟ್ಟದ ಸಭೆಯಲ್ಲಿ ವೆಯಕ್ತಿಕ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು. ನರೇಗಾ ಯೋಜನೆಯಡಿ ಗ್ರಾಪಂನಿಂದ ಜಾನುವಾರುಗಳ ಶೆಡ್, ಬಚ್ಚಲು ಗುಂಡಿ, ಎರೆಹುಳ ಗೊಬ್ಬರದ ತೊಟ್ಟಿ, ಕಷಿ ಹೊಂಡ, ಬದು ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗೆ ಧನ ಸಹಾಯ ನೀಡಲಾಗುವುದು. ಡಿಜಿಟಲ್ ಟಚ್ ನೀಡಿದೆ. ಬೆರಳ ತುದಿಯಲ್ಲೇ ಆನ್ಲೈನ್ ಮೂಲಕ ಕ್ಯೂಆರ್ ಕೋಡ್ ಅಥವಾ ಜಠಿಠಿಟಠ://ಞಜ್ಞ್ಟಛಿಜಚ.ಚ್ಟ್ಞಚಠಿಚಚ.ಜಟಡ.ಜ್ಞಿ/ ಲಿಂಕ್ ಬಳಸಿ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು ಎಂದರು. ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ರು ಬಿ.ಎನ್., ಪ್ರಶಾಂತ ಹಿರೇಮಠ, ರಾಜಶೇಖರ ಕಡೆಮನಿ ಹಾಗೂ ಸಿಬ್ಬಂದಿ ಇದ್ದರು.