ಜಿಲ್ಲೆ

ಕಾಮಗಾರಿ ಕಳಪೆಯಾದರೆ ಕಠಿಣ ಕ್ರಮ

ಸುರಪುರ : ನಗರದಲ್ಲಿ ಸ್ಲಂ ಬೋರ್ಡ್ನಿಂದ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯಲ್ಲಿ ಕಳಪೆ ಕಂಡುಬAದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಎಚ್ಚರಿಸಿದರು.

ನಗರದ ಸಂತೆಪೇಟೆ ಮತ್ತು ವೆಂಕಟಪುರದ ಬಳಿ ನಿರ್ಮಿಸುತ್ತಿರುವ ಸ್ಲಮ್ ಬೋರ್ಡ್ ಮನೆಗಳ ಸ್ಥಳಕ್ಕೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಡವರಿಗಾಗಿ ಸೂರು ನಿರ್ಮಿಸಿಕೊಡುತ್ತಿದ್ದು, ನಿರ್ಮಾಣದಲ್ಲಿ ಗುಣಮಟ್ಟದ ಸಾಮಗ್ರಿ ಬಳಸಬೇಕು. ಕಾಮಗಾರಿ ಕಳಪೆಯಾದರೆ ಸಹಿಸುವುದಿಲ್ಲ. ಕ್ರಿಯಾಯೋಜನೆಯಂತೆ ನಿರ್ಮಿಸಬೇಕು ಎಂದು ತಾಕೀತು ಮಾಡಿದರು.

ಈ ಮನೆಗಳ ತ್ಯಾಜ್ಯ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ, ಜನರ ಸುಗಮ ಸಂಚಾರಕ್ಕಾಗಿ ಗುಣಮಟ್ಟದ ರಸ್ತೆ ಇತರ ಸೌಲಭ್ಯ ಒದಗಿಸಿಕೊಡಬೇಕು ಎಂದರು.

ಕಾರ್ಯಪಾಲಕ ಅಭಿಯಂತರ ಖಯೂಮ್, ಎಇಇ ದೇವೇಂದ್ರಕುಮಾರ, ಉಪ ಅಭಿಯಂತರ ರಾಮಾಂಜನೇಯ ರೆಡ್ಡಿ, ಎಇ ನಿತೇಶ, ವೆಂಕೋಬ ಯಾದವ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ರವಿ ಸಾಹುಕಾರ ಆಲ್ದಾಳ್, ನಗರಸಭೆ ಸದಸ್ಯರಾದ ಧರ್ಮಣ್ಣ ಮಡಿವಾಳ, ಜುಮ್ಮಣ್ಣ ಕೆಂಗೂರಿ, ಖಮರುದ್ದೀನ್, ಅಹ್ಮದ್ ಶರೀಫ್, ಮೆಹಿಬೂಬ್ ಸಾಬ್, ಶಕೀಲ್ ಇತರರಿದ್ದರು.