ಜಿಲ್ಲೆ

ಕಾಫಿ ನಿಯಮಿತ ಸೇವನೆಯಿಂದ ಆರೋಗ್ಯ

ಚಿಕ್ಕಮಗಳೂರು: ನಿಯಮಿತವಾಗಿ ಕಾಫಿ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಮಕ್ಕಳ ತಜ್ಞ, ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ಹೇಳಿದರು. ನಗರದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಚೇರಿಯಲ್ಲಿ ಆಯೋಜಿಸಿದ್ದ ಕಾಫಿ ತಳಿಯ ಆವಿಷ್ಕಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾಫಿ ಸೇವನೆ ಆರೋಗ್ಯಕ್ಕೆ ಮಾರಕ ಎಂಬುದು ತಪ್ಪು ಕಲ್ಪನೆ. 350 ವರ್ಷಗಳಿಂದ ನಮ್ಮ ಜನ ಕಾಫಿ ಕುಡಿಯುತ್ತಿದ್ದಾರೆ. ಅವರಿಗೆ ಕಾಫಿ ಸೇವನೆಯಿಂದ ಈವರೆಗೆ ಯಾವ ರೋಗವೂ ಬಂದಿರುವ ಉದಾಹರಣೆಗಳಿಲ್ಲ. ಕಾಫಿ ಸೇವನೆಯಿಂದ ರೋಗಗಳು ಬರುವುದಿಲ್ಲ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು.</p><p>ಕಾಫಿಯನ್ನು ಬೀಜದಿಂದ ತಯಾರಿಸುವುದರಿಂದ ಅದು ಆಯುರ್ವೆದ ಪಾನೀಯ. ಅತಿಯಾದ ಕಾಫಿ ಸೇವನೆ ಒಳ್ಳೆಯದಲ್ಲ. ಆದರೆ ನಿಯಮಿತವಾಗಿ ಕುಡಿಯುವುದರಿಂದ ಬುದ್ಧಿ ಚುರುಕಾಗುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಂಭವ ಕಡಿಮೆಯಾಗುತ್ತದೆ. ಕರುಳಿಗೆ ಸಂಬಂಧಿಸಿದ ಕ್ಯಾನ್ಸರ್ ರೋಗಗಳು ಬರುವುದಿಲ್ಲ ಎಂದರು. ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಗುಣಮಟ್ಟದ ಕಾಫಿ ಬೆಳೆಯಲು ಬೆಳೆಗಾರರು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಆರ್.ಎಂ.ಮಹೇಶ್, ಉಪಾಧ್ಯಕ್ಷ ಎಂ.ಶಾಂತರಾಮ ಹೆಗಡೆ, ಜಂಟಿ ಕಾರ್ಯದರ್ಶಿ ಜೆ.ಎಸ್.ಶಿವಣ್ಣ, ನಿರ್ದೇಶಕರಾದ ಡಾ. ವಿನಾಯಕ, ಗೌತಮ್ಂದ್, ಎ.ಕೆ.ಮಂಜಪ್ಪ, ಜಿತೇಂದ್ರ, ದೇವಪ್ರಸಾದ್, ಕುಮಾರಸ್ವಾಮಿ, ಭೀಮಾಚಾರ್, ಶ್ರೀಕಾಂತ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧರಾಜು ಇದ್ದರು.