ಜಿಲ್ಲೆ

ಕಾಫಿ ನಾಡಿನಲ್ಲಿ ನವರಾತ್ರಿ ಸಂಭ್ರಮ

Chikkamagaluru

ಶೃಂಗೇರಿ: ಕಾಫಿ ನಾಡಿನ ಜನ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. ದಸರಾ ಪೂರ್ವಭಾವಿಯಾಗಿ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಮಠ, ಕಳಸ, ಹೊರನಾಡು ದೇವಾಲಯಗಳಲ್ಲಿ ದಸರಾ ಪೂಜೆ ನೆರವೇರಿಸಲಾಯಿತು. ಸೆ.26ರಂದು ದಸರಾ ಉತ್ಸವ ಆರಂಭವಾಗಲಿದೆ.

ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶ್ರೀ ಶಾರದಾ ಪರಮೇಶ್ವರಿಯ ಶರನ್ನವರಾತ್ರಿ ಪ್ರಯುಕ್ತ ಶ್ರೀ ಶಾರದಾಂಬಾ ಮಹಾಭಿಷೇಕ ನೆರವೇರಿತು. ಪಂಚಾಮೃತ ಅಭಿಷೇಕದ ಬಳಿಕ ಜನನ್ನಾತೆಗೆ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಬಾರಿ ಶ್ರೀಸೂಕ್ತ ಪಠಣದಿಂದ ಅಭಿಷೇಕ ನಡೆಸಲಾಯಿತು.</p><p>ಮಂದಸ್ಮಿತೆಯಾದ ತಾಯಿ ಶಾರದೆ ತನ್ನ ಕಾಲುಗಳ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು ಈ ಸೃಷ್ಟಿಗೆ ನಾನೇ ತಾಯಿ.ನೀನು ಮಗುವಿನಂತೆ. ನೀನು ನನ್ನನ್ನು ನಿರಂತರ ಭಜಿಸು, ಸದಾ ನಿನ್ನನ್ನು ನಾನು ಮಗುವಿನಂತೆ ರಕ್ಷಿಸುತ್ತೇನೆ’ ಎಂದು ಭಕ್ತನನ್ನು ಕುರಿತು ಹೇಳುಂತಿರುವ ಜಗತ್ಪ್ರಸೂತಿಕಾ ಅಲಂಕಾರವನ್ನು ಮಾಡಲಾಗಿತ್ತು. ಅದನ್ನು ಭಕ್ತರು ಕಣ್ತುಂಬಿಕೊಂಡರು. ನವರಾತ್ರಿಯಲ್ಲಿ ಜಗನ್ಮಾತೆಯನ್ನು ಮುತ್ತು, ಪಚ್ಚೆ, ವಜ್ರಗಳಿಂದ ಮಾಡಿದ ಅಮೂಲ್ಯ ಹಾಗೂ ನಯನ ಮನೋಹರ ಆಭರಣಗಳಿಂದ ಅಲಂಕರಿಸಲಾಗುತ್ತದೆ. ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.