ಚಿಕ್ಕಮಗಳೂರು: ಕೈಮರ ಲಿಂಗದಹಳ್ಳಿ ರಸ್ತೆಯ ಭೈನೆಕೋಲು ಗ್ರಾಮದ ಬಳಿ ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಖಾಸಗಿ ಪ್ರವಾಸಿ ಬಸ್ ಕಾಫಿ ತೋಟಕ್ಕೆ ನುಗ್ಗಿದ ಘಟನೆ ಭಾನುವಾರ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಿಂದ ೨೨ ಜನ ಪ್ರವಾಸಿಗರನ್ನು ಕರೆತರುತ್ತಿದ್ದ ಈ ಬಸ್ ಭೈನೆಕೋಲು ಗ್ರಾಮದ ಬಳಿ ಬರುವಾರ ರಸ್ತೆ ಮಧ್ಯೆಯ ಗುಂಡಿಯನ್ನು
ತಪ್ಪಿಸಲು ಹೋಗಿ ರಸ್ತೆ ಬದಿಯ ಕಾಫಿ ತೊಟಕ್ಕೆ ನುಗ್ಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ.
ಸಿಲ್ವರ್ ಮರಕ್ಕೆ ಬಸ್ ಒರಗಿ ನಿಲ್ಲದೇ ಹೋಗಿದ್ದರೆ ಬಸ್ ಪಲ್ಟಿಯಾಗಿ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಬಸ್ಸಿನಲ್ಲಿದ ಪ್ರಯಾಣಿಕರು ಸುರಕ್ಷಿತವಾಗಿದ್ದು
ಬೇರೆ ವಾಹನದಲ್ಲಿ ಪ್ರಯಾಣ ಮುಂದುವರೆಸಿದ್ದಾರೆ.