ವಿಜಯವಾಣಿ ಸುದ್ದಿಜಾಲ ಕೆಜಿಎ್
ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಸಮಾಜವನ್ನು ಕಟ್ಟುವ ದೃಷ್ಟಿಯಿಂದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಪೊಲೀಸ್ ಇಲಾಖೆ ವತಿಯಿಂದ ನಗರದ ಚಾಂಪಿಯನ್ ರೀಫ್ಸ್‌ನ ಪೊಲೀಸ್ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಸಮಾರೋಪದಲ್ಲಿ ಮಾತನಾಡಿದರು. ಸ್ಟೂಡೆಂಟ್ ಪೊಲೀಸ್ ಕೆಡೆಟ್ ಒಂದು ರಾಷ್ಟೀಯ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಅಡಗಿರುವ ನಾಯಕತ್ವದ ಗುಣಗಳನ್ನು ಹೊರತೆಗೆಯುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಸಾಮಾಜಿಕ ಜವಾಬ್ದಾರಿ ಗುಣ ಅಳವಡಿಸಿಕೊಳ್ಳಿ: ನಾಯಕತ್ವದ ಗುಣ ಬೆಳಸಿಕೊಂಡು ದೇಶವನ್ನು ಕಟ್ಟುವುದಕ್ಕೆ ಅಗತ್ಯವಾದ ಸಾಮಾಜಿಕ ಜವಾಬ್ದಾರಿ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪೊಲೀಸರೊಂದಿಗೆ ಯಾವ ರೀತಿ ಸ್ಪಂದಿಸಬೇಕು ಹಾಗೂ ಹಿರಿಯರಿಗೆ ಹೇಗೆ ಗೌರವ ನೀಡಿ ನಡೆದುಕೊಳ್ಳಬೇಕೆಂಬ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಕೇಂದ್ರ ವಲಯದ ಎಲ್ಲ ಕಡೆಗಳಲ್ಲೂ ಈ ಕಾರ್ಯಕ್ರಮವು ನಡೆಯುತ್ತಿದೆ. ಇಲ್ಲಿನ ಪೊಲೀಸ್ ಅಧೀಕ್ಷಕಿ ಧರಣಿದೇವಿ ಅವರು ಮುತುವರ್ಜಿ, ಆಸಕ್ತಿಯಿಂದ ಸತತವಾಗಿ ಪ್ರತಿ ಶನಿವಾರ ತರಗತಿಗಳನ್ನು ಏರ್ಪಡಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಕರಾಟೆ ಸಹಿತ ವಿವಿಧ ತರಬೇತಿ ನೀಡಿ ಸಂಚಾರ ನಿಯಮಗಳ ಬಗ್ಗೆ ಅರಿವನ್ನು ಮೂಡಿಸುವ ಗೀತೆಯನ್ನು ರಚಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಅಭಿನಂದಿಸಿದರು.
ವಿದ್ಯಾರ್ಥಿ ಪೊಲೀಸ್ ಕೆಡೆಟ್ ತರಬೇತಿ ಪಡೆದಿರುವ 250 ಮಂದಿ ವಿದ್ಯಾರ್ಥಿಗಳಾದ ನೀವೆಲ್ಲರೂ ಮನಸ್ಸು ಮಾಡಿದ್ದಲ್ಲಿ ಒಂದಲ್ಲ ಒಂದು ದಿನ ಐಎಎಸ್, ಐಪಿಎಸ್, ಪೊಲೀಸ್ ಅಧಿಕಾರಿಗಳು ಮತ್ತು ಅದಕ್ಕಿಂತ ಹೆಚ್ಚಾಗಿ ಸಮಾಜವನ್ನು ಸುಧಾರಿಸುವ ಸುಧಾರಕರಾಗಬಹುದು ಎಂದು ರವಿಕಾಂತೇಗೌಡ ಹೇಳಿದರು.
ಆಧುನಿಕ ಬೀಟ್ ವ್ಯವಸ್ಥೆಯಿಂದ ಅಪರಾಧ ಪ್ರಕರಣಗಳ ನಿಯಂತ್ರಣ
ಮುಳಬಾಗಿಲು: ಕೇಂದ್ರ ವಲಯದ ಪೊಲೀಸ್ ಪಿಎಸ್‌ಐನಿಂದ ಐಜಿ ವರೆಗೂ ಅಧಿಕಾರಿಗಳ ಅನ್‌ಲೈನ್ ಕ್ಲಾಸ್ ಅನ್ನು ಶ್ರೀದಲ್ಲೇ ಅರಂಭಿಸಿ, ಆಧುನಿಕ ಬೀಟ್ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಇದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ಕೇಂದ್ರ ವಲಯದ ಐಜಿ ಡಾ. ಬಿ.ಆರ್.ರವಿಕಾಂತೇಗೌಡ ಹೇಳಿದರು.
ಮುಳಬಾಗಿಲು ನಗರ ಠಾಣೆಯಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ವಾತನಾಡಿ, ಮುಳಬಾಗಿಲಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಜಯಂತಿ ಹಾಗೂ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಟನೆಗಳು ನಡೆಯಬಾರದೆಂಬ ಕಾರಣಕ್ಕೆ ಖುದ್ದು ಉಸ್ತುವಾರಿ ವಹಿಸಿದ್ದೇನೆ ಎಂದರು.
ಕಳೆದ ವರ್ಷ ಶ್ರೀನಿವಾಸಪುರ ವೃತದಿಂದ ವಿರೂಪಾಕ್ಷಿ ವೃತ್ತಕ್ಕೆ ಸಾಗುತ್ತಿದ್ದ ವೇಳೆ, ವಿದ್ಯುತ್ ಕಡಿತಗೊಂಡಿದ್ದು, ಕಿಡಿಗೇಡಿಗಳು ಕಲ್ಲು ತೂರಾಟ ವಾಡಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ತಕ್ಷಣ ಸ್ಥಳದಲ್ಲಿದ್ದ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. ಮುಳಬಾಗಿಲು 30 ವರ್ಷಗಳ ಹಿಂದೆ ಮತೀಯ ಗಲಭೆಗಳಿಂದ ಕಳಂಕ ಹೊಂದಿದ್ದು, ಅದನ್ನು ತೊಡೆದುಹಾಕಲು ಪ್ರಜ್ಞಾವಂತ ನಾಗರಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಪೊಲೀಸ್ ಪೇದೆಗಳಾಗಿ ಇಂಜಿನಿಯರಿಂಗ್, ಸ್ನಾತ್ತಕೋತ್ತರ ಮತ್ತು ಪದವಿಧರರು ಸೇವೆ ಸಲ್ಲಿಸತ್ತಿದ್ದು, ಒಬ್ಬೊಬ್ಬ ಪೊಲೀಸ್ ಪಿಎಸ್‌ಐಯಂತೆ ಕಾರ್ಯನಿರ್ವಹಿಸುವ ಕೌಶಲ ಹೊಂದಿದ್ದಾರೆ. ಅವರಿಗೆ ಸೂಕ್ತ ವಾರ್ಗದರ್ಶನ ನೀಡಿದರೆ, ಬೀಟ್ ವ್ಯವಸ್ಥೆ ಜಾರಿಯಾಗಿ ಅವರ ಹಂತದಲ್ಲಿ ನ್ಯಾಯಾಲಯ ಸಮನ್ಸ್, ಪುಂಡ ಪೋಕರಿಗಳ ಪಟ್ಟಿ, ಸವಾಜಘಾತುಕ ಶಕ್ತಿಗಳ ವಾಹಿತಿ, ಕಾನೂನು ಬಾಹಿರ ಚಟುವಟಿಕೆಗಳ ವಾಹಿತಿ ಸಂಗ್ರಹಿಸುವ ಮೂಲಕ ಅದನ್ನು ನಿಯಂತ್ರಣ ವಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಚುನಾವಣೆ ಸಂದರ್ಭದಲ್ಲಿ ಪುಡಿರೌಡಿಗಳು, ಸವಾಜಘಾತುಕ ಶಕ್ತಿಗಳ ಮೇಲೆ ನಿಗಾ ವಹಿಸಿ ಠಾಣೆಗೆ ಕರೆಸಿ, ಜಾಮೀನು ಭದ್ರತೆ ಮೇಲೆ ಬಿಡುಗಡೆ ವಾಡಲಾಗುವುದು. ಇದು ಅಲ್ಲದೇ ಅಧಿಕಾರಿಗಳ ಮಟ್ಟದಲ್ಲಿ ದಿಢೀರ್ ತಪಾಸಣೆ ವಾಡುವ ಕಾರ್ಯ ಆರಂಭಿಸಲಾಗುವುದು. ಕೆಳಮಟ್ಟದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಾಹಿತಿ ಇಲ್ಲದೆ, ದಾಳಿ ವಾಡುವುದರಿಂದ ಹಲವು ವಾಹಿತಿಗಳು ಮೇಲ್ಮಟ್ಟದ ಅಧಿಕಾರಿಗಳಿಗೆ ಸುಲಭವಾಗಿ ಸಿಗುತ್ತದೆ ಎಂದರು.
ಐಜಿ ಅವರು ಕುರುಡುಮಲೆ ವಿನಾಯಕ ದೇವಾಲಯ, ಮುಳಬಾಗಿಲು ಅಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಎಸ್‌ಪಿ ಎಂ.ನಾರಾಯಣ, ಕೆಜಿಎಫ್ ಎಸ್‌ಪಿ ಧರಣಿದೇವಿ ಇದ್ದರು.
ಬಹುಮಾನ ೋಷಣೆ: 250 ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡಿದ್ದು, ಇಲ್ಲಿನ ಹೆಣ್ಣುಮಕ್ಕಳೇ ಸ್ಟ್ರಾಂಗ್ ಆಗಿದ್ದಾರೆ. ಏಕೆಂದರೆ ವಿವಿಧ ವಿಷಯಗಳ ಬಗ್ಗೆ 6 ಮಂದಿ ವಿದ್ಯಾರ್ಥಿಗಳು ಭಾಷಣ ಮಾಡಿದ್ದು, ಅವರಲ್ಲಿ 5 ಮಂದಿ ವಿದ್ಯಾರ್ಥಿನಿಯರೇ ಆಗಿರುವುದು ಸಂತಸದ ವಿಚಾರ. ತಮ್ಮ ವತಿಯಿಂದ ಭಾಷಣ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೂ ತಲಾ ಒಂದು ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದರು. ಅಲ್ಲದೇ ಮಕ್ಕಳಿಗೆ ತರಬೇತಿ ನೀಡಿದ ತರಬೇತುದಾರರಿಗೆ 15 ಸಾವಿರ ರೂಪಾಯಿ ಬಹುಮಾನ ಮತ್ತು ಎಸ್‌ಪಿ ಅವರು ಶಿಫಾರಸ್ಸು ಮಾಡುವ 4 ಮಂದಿಗೆ ಸೇರಿ ಒಟ್ಟು 25 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ರವಿಕಾಂತೇಗೌಡ ತಿಳಿಸಿದರು.
ಭಯ ತೊಲಗಿಸುವ ಕಾರ್ಯಕ್ರಮ: ಈ ಮೊದಲು ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ/ಎನ್‌ಎಸ್‌ಎಸ್ ಮೂಲಕ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿ, ಮಾಜಿ ಸೈನಿಕರು ತರಬೇತಿ ನೀಡುತ್ತಿದ್ದರು.ಆದರೆ ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಕೆಲಸವನ್ನು ಮಾಡುವ ವಾತಾವರಣ ಸೃಷ್ಟಿಸಿ, ಆ ಮೂಲಕ ಪೊಲೀಸ್ ಇಲಾಖೆ ಬಗ್ಗೆ ಯುವ ಮನಸ್ಸುಗಳಲ್ಲಿರುವ ಭಯವನ್ನು ತೆಗೆದುಹಾಕಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.