ಜಿಲ್ಲೆ

ಕಾನೂನು ದುರುಪಯೋಗ ಕಳವಳಕಾರಿ

ಹುಕ್ಕೇರಿ: ಪುರುಷರಿಗೆ ಸಮಾನವಾಗಿ ದುಡಿಯುವ ಮಹಿಳೆ ವೈಯಕ್ತಿಕ ಬದುಕನ್ನು ಯಾವ ಮಟ್ಟದಲ್ಲಿ ರೂಪಿಸಿಕೊಳ್ಳಬೇಕು ಎಂದು ವಿಮರ್ಶೆಗೆ ಒಳಪಡಿಸಬೇಕು ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶೆ ರೇಣುಕಾ ಕುಲಕರ್ಣಿ ಹೇಳಿದರು.

ತಾಲೂಕಿನ ಕೋರ್ಟ್ ಇ-ಲೈಬ್ರರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸ್ವೇಚ್ಛಾಚಾರದ ವರ್ತನೆಯಿಂದ ಕಾನೂನು ದುರುಪಯೋಗ ಪಡಿಸಿಕೊಳ್ಳುವುದರಿಂದಾಗುವ ಅನಾಹುತಗಳು ಕಳವಳಕಾರಿಯಾಗಿವೆ ಎಂದರು.

ತಹಸೀಲ್ದಾರ್ ಮಂಜುಳಾ ನಾಯಕ, ನ್ಯಾಯಾಧೀಶ ಕೆ.ಎಸ್.ರೊಟ್ಟೇರ, ಡಾ.ನಿರಂಜನ ಪಾಟೀಲ, ಕವಿತಾ ಜಿ.ಎಂ., ಸೀಮಾ ಶೆಟ್ಟಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಸವರಾಜ ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ಎಜಿಪಿ ಅನಿಲ ಕರೋಶಿ, ರಾಮಚಂದ್ರ ಜೋಶಿ, ಬಿ.ಬಿ.ಪಾಸಪ್ಪಗೋಳ, ಪಿ.ಆರ್.ಚೌಗಲಾ, ಎ.ಎಂ.ಹ್ಯಾಟಗೋಳ, ಎಂ.ಎ.ಪಾಟೀಲ, ಡಿ.ಕೆ.ಅವರಗೋಳ, ಎಚ್.ಎಲ್.ಪಾಟೀಲ, ಕೆ.ಪಿ.ಶಿರಗಾಂವಕರ, ಎಸ್.ವೈ.ಏಗನ್ನವರ, ಆಶಾ ಸಿಂಗಾಡೆ, ಎಸ್.ಜಿ.ನದಾಫ ಇತರರಿದ್ದರು.