ಜಿಲ್ಲೆ

ಕಾನೂನು ಗೌರವಿಸುವವರಿಗೆ ಪೊಲೀಸ್ ಇಲಾಖೆ ಜನಸ್ನೇಹಿ

ಕಿಕ್ಕೇರಿ: ಹದಿಹರೆಯದ ಮಕ್ಕಳು ಅವಘಡಗಳನ್ನು ಮಾಡಿಕೊಳ್ಳುತ್ತಿದ್ದು, ತಿಳಿವಳಿಕೆ ನೀಡುವುದು ಹಿರಿಯ ಕರ್ತವ್ಯ ಎಂದು ಇನ್ಸ್‌ಪೆಕ್ಟರ್ ರೇವತಿ ತಿಳಿಸಿದರು.
ಪಟ್ಟಣದ ಆರಕ್ಷಕ ಠಾಣೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಗೌರವಿಸುವವರಿಗೆ ಇಲಾಖೆ ಜನಸ್ನೇಹಿಯಾಗಿದೆ ಎಂದರು.


ಕೆಪಿಎಸ್ ಪದವಿಪೂರ್ವ ಕಾಲೇಜಿನ ಮಕ್ಕಳನ್ನು ಪೊಲೀಸರು ಸ್ವಾಗತಿಸಿದರು. ಸ್ವಾಗತಕಾರರ ಕರ್ತವ್ಯ, ಇನ್ಸ್‌ಪೆಕ್ಟರ್, ಎಎಸ್‌ಐ, ಸಿಬ್ಬಂದಿ ವಿವರ, ಬಂದೂಕು ಬಳಕೆ ಸೇರಿದಂತೆ ಹಲವಿ ವಿಚಾರಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ಐಪಿಸಿ, ಸಿಆರ್‌ಪಿಸಿ ಕಾಯ್ದೆ, ಸ್ಥಳೀಯ ಕಾಯ್ದೆ, ಸಾಕ್ಷೃ ಕಲೆ ಹಾಕುವಿಕೆ, ಆರೋಪಿಗಳ ವಿಚಾರಣೆ, ಅಪಘಾತವಾದಾಗ, ಕಳವು ಆದಾಗ ಮಾಡಬೇಕಾದ ತನಿಖೆ ಮತ್ತಿತರ ವಿಷಯಗಳ ಕುರಿತು ಕಿರು ಪರಿಚಯ ಮಾಡಿಕೊಡಲಾಯಿತು.


ವಿದ್ಯಾರ್ಥಿಗಳು ನಿರ್ಭಯವಾಗಿ ಹತ್ತು ಹಲವು ಸಮಸ್ಯೆಗಳನ್ನು ಪೊಲೀಸರೊಂದಿಗೆ ಚರ್ಚಿಸಿ ಖುಷಿಪಟ್ಟರು. ಹಲವರು ಪೊಲೀಸ್ ಅಧಿಕಾರಿಗಳಾಗುವ ಬಯಕೆ ವ್ಯಕ್ತಪಡಿಸಿದರು.


ಎಎಸ್‌ಐ ರಮೇಶ್, ಸಿಬ್ಬಂದಿ ವಿನೋದ್, ಸುನೀಲ್, ಸೌಂದರ್ಯ, ಜಾಫರ್, ಕುಮಾರ್, ಪ್ರಾಂಶುಪಾಲ ದೊರೆಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಕುಮಾರಸ್ವಾಮಿ ಉಪಸ್ಥಿತರಿದ್ದರು.