ಜಿಲ್ಲೆ

ಕಾನೂನು ಅರಿವು ನೆರವು ಕಾರ್ಯಕ್ರಮ

ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕಿನ ಕರ್ಕಿಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಗುರುವಾರ ಕಾನೂನು ಅರಿವು, ನೆರವು ಕಾರ್ಯಕ್ರಮ ಆಯೋಜಿಸಲಾಯಿತು.


ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿ ಜೀವನ ಖಾಲಿ ಪಾತ್ರೆ ಇದ್ದಂತೆ. ಶಾಲೆಯಲ್ಲಿ ಜ್ಞಾನವೆಂಬ ಅರಿವು ಪಡೆಯುತ್ತಾನೆ. ನಾವೇ ನಿರ್ದೇಶಿಸಿ, ನಟಿಸುವ ಚಿತ್ರವೇ ಜೀವನ.ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿಗಳು ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವಿದ್ಯಾಭ್ಯಾಸದ ಕಡೆಗೆ ಗಮನ ನೀಡುವಂತೆ ಸಲಹೆ ನೀಡಿದರು.


ಪ್ರಭಾರ ಪ್ರಾಚಾರ್ಯ ಸತ್ಯಪ್ಪ ಕಂಬಳಿ, ಜಿಲ್ಲಾ ಮುಖ್ಯ ಕಾನೂನು ಅಭಿರಕ್ಷಕ ರವೀಂದ್ರ ವಿ. ಸಿಗನಳ್ಳಿ, ನಿಲಯ ಪಾಲಕ ಬಸವರಾಜ ಕಟಗಿ, ಶಿಕ್ಷಕ ಸಂಗಪ್ಪ ನವಲಿ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.