ಶೃಂಗೇರಿಯಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಪ್ರೌಢಾಶಾಲೆ ಎಂಟನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪಠಾಣಾಧಿಕಾರಿ ಮೋಹನ್‌ಕುಮಾರ್ ಇದ್ದರು. 
ಜಿಲ್ಲೆ

ಕಾನೂನು ಅರಿತುಕೊಳ್ಳಿ

ಶೃಂಗೇರಿ: ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆಯಬೇಕು. ಹಕ್ಕು ಹಾಗೂ ಕರ್ತವ್ಯದ ಕುರಿತು ಮಕ್ಕಳು ಅರಿತುಕೊಂಡಾಗ ಉನ್ನತ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದು ಪೋಲಿಸ್ ಉಪನಿರೀಕ್ಷಕ ನಿಂಗಪ್ಪ ಡಿ. ಜಕ್ಕಣವರ್ ತಿಳಿಸಿದರು.

ಗುರುವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಪ್ರೌಢಾಶಾಲೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಹಕ್ಕಿನ ಜತೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಇದೆ. ಸಮಾನತೆಯ ಹಕ್ಕು ಹಾಗೂ ಸಾಮಾಜಿಕ ಅನ್ಯಾಯದ ಮತ್ತು ಶೋಷಣೆಯಿಂದ ರಕ್ಷಿಸಲ್ಪಡುವ ಹಕ್ಕನ್ನು ನೀಡಲಾಗಿದೆ ಎಂದರು.

ಪೊಲೀಸ್ ಇಲಾಖೆ ಎಂದರೆ ವಿದ್ಯಾರ್ಥಿಗಳು ಭಯಪಡಬಾರದು. ಪೊಲೀಸರು ಜನಸ್ನೇಹಿಗಳು. ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಬೇಕಾದಲ್ಲಿ ಇಲಾಖೆಗೆ ಬಂದು ಪಡೆಬಹುದು ಎಂದು ಹೇಳಿದರು.

ಉಪಠಾಣಾಧಿಕಾರಿ ಮೋಹನ್‌ಕುಮಾರ್ ಮಾತನಾಡಿ, ಶಾಲಾ ಮಕ್ಕಳಲ್ಲಿ ಪೊಲೀಸ್ ಇಲಾಖೆ ಕುರಿತು ಆತಂಕ ದೂರಮಾಡುವ ಉದ್ದೇಶದಿಂದ ತೆರೆದಮನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳಲ್ಲಿ ಕುತೂಹಲ ಇರುವುದು ಸಹಜ. ಅವರ ಪ್ರಶ್ನೆಗಳಿಗೆ ಇಲಾಖೆಯಿಂದ ಮಾಹಿತಿ ನೀಡಲಾಗುತ್ತಿದೆ ಎಂದರು.

ಉಪನಿರೀಕ್ಷಕ ಮಹೇಶ್ ಮೇಲ್‌ಗಿರಿ, ಸಿಬ್ಬಂದಿ ಪ್ರಸನ್ನ, ರಘು, ಅಶೋಕ್, ಮಂಜುನಾಥ್ ಇದ್ದರು.