ಜಿಲ್ಲೆ

ಕಾಣೆಯಾಗಿರುವ ಬಾಲಕನ ಸುಳಿವಿಗೆ ಸಹಕರಿಸಿ

ಚಾಮರಾಜನಗರ: ನಗರದ ಬಾಲಕರ ಸರ್ಕಾರಿ ಬಾಲಮಂದಿರ ಸ್ವಾಗತ ಘಟಕದ ನಿವಾಸಿ ಕೈಸ್ ಮೊಹಮ್ಮದ್(14)ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ. ಕೈಸ್ ಮೊಹಮ್ಮದ್ 4 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಿಹಾರಿ ಭಾಷೆ ಮಾತನಾಡುತ್ತಾನೆ. ಈತನ ಸುಳಿವು ದೊರೆತಲ್ಲಿ ಪಟ್ಟಣ ಪೊಲೀಸ್ ಠಾಣೆ ದೂ.ಸಂ 08226-222047, ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ 08226-222383 ಸಂಪರ್ಕಿಸುವಂತೆ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.