ಐಚಂಡ ಹಾಗೂ ಪುಲಿಯಂಡ ತಂಡಗ ನಡುವೆ ಹಣಹಣಿ  
ಜಿಲ್ಲೆ

ಕಾಡ್ಯಮಾಡ, ಅಡ್ಡೇಂಗಡ, ಕಲಿಯಂಡ ಮುನ್ನಡೆ

ವಿರಾಜಪೇಟೆ: ದೇವಣಗೇರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮೂಕೋಂಡ ಕಪ್ ಫೈವ್ ಸೈಡರ್ಸ್‌ ಫುಟ್ಬಾಲ್ ಪಂದ್ಯಾವಳಿಯಲ್ಲಿ ಐಚಂಡ, ಮನೆಯಪಂಡ, ಮಂಡೇಡ, ಚೌರೀರ, ಅಂಜಪರವಂಡ, ಕಳ್ಳಿಚಂಡ, ಕೊದೇಂಗಡ, ಕಾಡ್ಯಮಾಡ, ಅಡ್ಡೇಂಗಡ, ಕಲಿಯಂಡ, ಕೂತಂಡ, ಕೊಲ್ಲೀರ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.

ಐಚಂಡ ತಂಡವು 3-1 ಗೋಲುಗಳಿಂದ ಪುಲಿಯಂಡ ತಂಡವನ್ನು ಸೋಲಿಸಿತು. ಐಚಂಡ ಪರ ಪವನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಮನೆಯಪಂಡ ತಂಡ 4-3 ಗೋಲುಗಳಿಂದ ವು ಕಟ್ಟೇರ ತಂಡವನ್ನು ಪರಾಭವ ಗೊಳಿಸಿತು.

ಮನೆಯಪಂಡ ತಂಡದ ಪರ ಕರುಂಬಯ್ಯ ‘ಹ್ಯಾಟ್ರಿಕ್’ ಸಾಧನೆ ಮಾಡಿದರು. ಮಂಡೇಡ ತಂಡ 5-4 ಗೋಲುಗಳಿಂದ ಆಲೇಮಾಡ ತಂಡವನ್ನು ‘ಸಡನ್ ಡೆತ್’ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ 2 ತಂಡಗಳು ಸಮಬಲ ಸಾಧಿಸಿದ ಕಾರಣ ಸಡನ್ ಡೆತ್‌ಗೆ ಮೊರೆ ಹೋಗಬೇಕಾಯಿತು. ಮಂಡೇಡ ಪರ ಅತಿಥಿ ಆಟಗಾರ ಮಂಡೇಪಂಡ ಸುಬಿನ್ ಭೀಮಯ್ಯ ‘ಹ್ಯಾಟ್ರಿಕ್’ ಸಾಧನೆ ಮಾಡಿದರು.

ಚೌರೀರ(ಹೋದವಾಡ) ತಂಡ 3-2 ಗೋಲುಗಳಿಂದ ಅಲ್ಲಪಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ಮಣಿಸಿತು. ನಿಗದಿತ ಅವಧಿಯಲ್ಲಿ ಇತ್ತಂಡಗಳು ಗೋಲು ಗಳಿಸುವುದರಲ್ಲಿ ವಿಫಲವಾದ ಕಾರಣ ‘ಟೈ ಬ್ರೇಕರ್’ ನಿಯಮ ಅಳವಡಿಸಲಾಯಿತು.

ಅಂಜಪರವಂಡ ತಂಡ 3-1 ಗೋಲುಗಳಿಂದ ಶಿವಚಾಳಿಯಂಡ ತಂಡವನ್ನು ಸೋಲಿಸಿತು. ಕಳ್ಳಿಚಂಡ ತಂಡ 7-0 ಗೋಲುಗಳಿಂದ ಅಣ್ಣೀರ ತಂಡವನ್ನು ಮಣಸಿತು. ಕೊದೇಂಗಡ ತಂಡ 2-0 ಗೋಲುಗಳಿಂದ ಕುಮ್ಮಂಡ(ಕೋಕೇರಿ) ತಂಡವನ್ನು ಪರಾಭವ ಗೊಳಿಸಿತು. ಪಾರುವಂಗಡ ತಂಡ ಗೈರಾದ ಕಾರಣ ಅಡ್ಡೇಂಗಡ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಕಲಿಯಂಡ ತಂಡ 6-5 ಗೋಲುಗಳ ಅಂತರದಲ್ಲಿ ದೇಯಂಡ ತಂಡವನ್ನು ‘ಟೈ ಬ್ರೇಕರ್’ ನಲ್ಲಿ ಮಣಿಸಿತು. ಇತ್ತಂಡಗಳು ನಿಗದಿತ ಅವಧಿಯಲ್ಲಿ 3-3 ಗೋಲುಗಳ ಸಮಬಲ ಸಾಧಿಸಿದ್ದವು. ಕೂತಂಡ ತಂಡ 2-0 ಗೋಲುಗಳಿಂದ ಬೊಳಿಯಾಡಿರ ತಂಡವನ್ನು ಪರಾಭವಗೊಳಿಸಿತು. ಕೊಲ್ಲೀರ ತಂಡ 1-0 ಗೋಲಿನಿಂದ ಮಲ್ಚೀರ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಇಂದಿನ ಪಂದ್ಯಗಳು
ಕೀತಿಯಂಡ-ಅಡ್ಡೇಂಗಡ(8.00 )
ಪೊರಕೋಂಡ-ಕಂಗಂಡ(8.45 )
ಮೂಕೋಂಡ-ಕೊಣಿಯಂಡ(9.30 )
ಮುಂಡಚಾಡೀರ-ಕುಲ್ಲಚಂಡ(10.15 )
ಮುಕ್ಕಾಟೀರ-ಕೊಂಡೀರ(11.00)