ಜಿಲ್ಲೆ

ಕಾಡುಕುರಿ ಬೇಟೆಯಾಡಿದ್ದ ಇಬ್ಬರ ಬಂಧನ

ವಿರಾಜಪೇಟೆ: ವಿರಾಜಪೇಟೆ ಉಪವಲಯ ಚೇಲಾವರದಲ್ಲಿ ಕಾಡುಕುರಿ ಬೇಟೆಯಾಡಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜನಾರ್ದನ ಹಾಗೂ ಕೋಯಬಯ್ಲು ಪೂಣಚ್ಚ ಬಂಧಿತರು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಪೂಣಚ್ಚ ಅವರ ಮನೆಯನ್ನು ಶೋಧಿಸಿದಾಗ 5 ಕೆ.ಜಿ.ಗೂ ಅಧಿಕ ಮಾಂಸ ಲಭಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕೋವಿ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಪೂಣಚ್ಚ ಜತೆಯಲ್ಲಿದ್ದ ಜನಾರ್ದನ ಅವರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸಿಎಫ್ ರೋಷನಿ, ಆರ್‌ಎಫ್‌ಒ ದಿಲೀಪ್ ಕುಮಾರ್, ಅಕ್ಕಮ್ಮ, ರಂಜಿತ್ ಸೋಮಯ್ಯ, ಸಚಿನ್ ನಿಂಬಾಳ್ಕರ್, ಅನಿಲ್ ಚೌಹಾಣ್, ಸಿಬ್ಬಂದಿ ಮಾಲತೇಶ್, ನಾಗರಾಜ್, ಚಂದ್ರ, ಪೊನ್ನಪ್ಪ, ಭರತ್, ಸುರೇಶ್, ನಾಣಯ್ಯ, ಅಶೋಕ್ ಭಾಗವಹಿಸಿದ್ದರು.