ಜಿಲ್ಲೆ

ಕಾಡು ಪ್ರಾಣಿಗಳ ಹಾವಳಿ ತಡೆಗೆ ಆಗ್ರಹ

ಚಾಮರಾಜನಗರ: ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಬಿಆರ್‌ಟಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಅರಣ್ಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿರು. ಜಿಲ್ಲೆಯ ಹಲವು ಕಡೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ಚಾಮರಾಜನಗರ ತಾಲೂಕಿನ ಕಲ್ಪುರ ಮತ್ತು ಇನ್ನಿತರೆ ಕಡೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿ ಜಮೀನುಗಳಲ್ಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಕೃಷಿಗೆ ತುಂಬಾ ತೊಂದರೆಯಾಗುತ್ತಿದೆ. ತಾಲೂಕಿನ ಕಲ್ಪುರ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಅರಣ್ಯಾಧಿಕಾರಿಗಳು ಹುಲಿ ಸೆರೆ ಹಿಡಿಯುವಲ್ಲಿ ವಿಲರಾಗಿದ್ದಾರೆ. ಶೀಘ್ರದಲ್ಲೇ ಹುಲಿ ಸೆರೆ ಹಿಡಿಯದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಮನುಷ್ಯರ ಮೇಲೆ ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಪ್ರಾಣ ಹಾನಿಯುಂಟಾಗುತ್ತಿದೆ. ಅರಣ್ಯದಲ್ಲಿ ರೆಸಾರ್ಟ್ ನಿರ್ಮಾಣ ಮಾಡಲಾಗಿದೆ. ಸಾರಿ ಮಾಡುವುದರಿಂದ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದು ಆರೋಪಿಸಿದರು.

ಇದೇ ವೇಳೆ ಸ್ಥಳಕ್ಕೆ ಅರಣ್ಯಾಧಿಕಾರಿ ಎಸಿಎ್ ಮಂಜುನಾಥ್ ಆಗಮಿಸಿದರು. ಅವರೊಂದಿಗೆ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ಸ್ಥಳೀಯರಿಂದ ಯಾಕೆ ಶುಲ್ಕ ಪಡೆಯುತ್ತೀರಾ. ರೈತರು ಪ್ರಾಣಿಗಳಿಗೆ ವಿಷ ಹಾಕುವುದಿಲ್ಲ. ವಿಷ ಹಾಕಿರುವವರನ್ನು ಬಂಧಿಸಿ. ಗಣಿಗಾರಿಕೆಗಳು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳು, ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಿವೆ. ಇಲ್ಲಿನ ವಾಚರ್‌ಗಳಿಗೆ ಸಂಬಳ ಕೊಡುತ್ತಿಲ್ಲ. ಹುಲಿಗಳು ಸತ್ತಿದ್ದಕ್ಕೆ ನೈತಿಕ ಹೊಣೆ ಹೊತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ರಾಜೀನಾಮೆ ನೀಡಬೇಕು. ರೈತರೊಂದಿಗೆ ಸಭೆ ನಡೆಸದೆ ತಾತ್ಸಾರ ಮಾಡಲಾಗುತ್ತಿದೆ. ಸುಖಾಸುಮ್ಮನೆ ರೈತರು ಕಾಡಿನೊಳಗೆ ಹಸು ಬಿಡಬಾರದು ಎಂದು ಹೇಳುತ್ತಾರೆ. ಅರಣ್ಯ ಇಲಾಖೆಯ ದಬ್ಬಾಳಿಕೆ ವಿರುದ್ಧ ಸಿಡಿದೇಳುವುದಕ್ಕೆ ರೈತರು ಕೆಟ್ಟವರಾಗುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಅಂಬಳೆ ಶಿವಕುಮಾರ್, ಮಾಡ್ರಳ್ಳಿ ಪಾಪಣ್ಣ, ಭೀಮನಬೀಡು ರಾಜು, ಕಲ್ಪುರ ಪಾಪು, ಮೇಲಾಜಿಪುರ ರಾಜೇಶ್, ಬೆಟ್ಟದ ಪುರ ಬಸವಣ್ಣ, ಹಿರೇಬೇಗೂರು ಗಂಗಾಧರ್, ಬೇರಂಬಾಡಿ ಶಶಿ, ಕೆ.ಕೆ.ಹುಂಡಿ ಪ್ರಸಾದ್ ಮತ್ತು ಇತರರು ಭಾಗವಹಿಸಿದ್ದರು.