ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು
ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನೇ ದಿನೇ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜೊತೆಗೆ ಕಿಡಿಗೇಡಿಗಳು ಉz್ದೆÃಶಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಚ್ಚುತ್ತಿರುವ ಅನುಮಾನ ಅರಣ್ಯ ಇಲಾಖೆ ಅಧಿಕಾರಿಗಳಿಗಿದೆ. ಹೀಗಾಗಿ ಕಾಡಿಗೆ ಕಿಚ್ಚು ಹಚ್ಚುವ ಕಿಡಿಗೇಡಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಇದೀಗ ಡ್ರೋಣ್ ಮೊರೆ ಹೋಗಿದೆ.
ಹೌದು. ಈ ವರ್ಷ ಬೇಸಿಗೆಗೂ ಮುನ್ನವೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಫೆಬ್ರವರಿ ಮೊದಲ ವಾರದಲ್ಲಿಯೇ ಚಾರ್ಮಾಡಿ ಘಾಟಿ ಸಮೀಪದ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ರಾಜ್ಯದ ಅತಿ ಎತ್ತರದ ಪರ್ವತ ಎಂಬ ಖ್ಯಾತಿಗೊಳಗಾಗಿರುವ ಮುಳ್ಳಯ್ಯನಗಿರಿ ಭಾಗದಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಯಾರೋ ಉz್ದÉÃಶಪೂರ್ವಕವಾಗಿಯೇ ಕಾಡಿಗೆ ಬೆಂಕಿ ಹಚ್ಚಿರುವ ಅನುಮಾನ ವ್ಯಕ್ತವಾಗಿತ್ತು. ಇದಕ್ಕೂ ಕಾರಣವಿದೆ. ಬೇಸಿಗೆ ಅವಧಿಯಲ್ಲಿ ಶೋಲಾ ಅರಣ್ಯ ಪ್ರದೇಶದಲ್ಲಿನ ಹುಲ್ಲುಗಾವಲು ಸಂಪೂರ್ಣ ಒಳಗೆ ನಿಲ್ಲುವುದರಿಂದ ಬಿಸಿಲಿನ ಝಳಕ್ಕೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಬೇಸಿಗೆಗೆ ಮುನ್ನವೇ ಕಾಡ್ಗಿಚ್ಚು ಕಾಣಿಸಿಕೊಂಡಿರುವುದು, ಅರಣ್ಯ ಇಲಾಖೆಯ ಅನುಮಾನಕ್ಕೆ ಕಾರಣವಾಗಿತ್ತು.
ಇದಲ್ಲದೆ ಕಾಡ್ಗಿಚ್ಚು ಕಾಣಿಸಿಕೊಂಡ ಪ್ರದೇಶಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಉz್ದÉÃಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿರುವ ಕುರಿತು ಕುರುಹುಗಳು ಅಧಿಕಾರಿಗಳಿಗೆ ಲಭ್ಯವಾಗಿದ್ದವು. ಹೀಗಾಗಿಯೇ ಉz್ದÉÃಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಲಾಗಿದೆ ಎಂಬ ಬಗ್ಗೆ ಅನಾಮದೆಯ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದರು.
ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಉದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚುವವರನ್ನು ಪತ್ತೆ ಮಾಡಲು ಡ್ರೋನ್ ಮೊರೆ ಹೋಗಿದ್ದಾರೆ. ಗಿರಿ ಶ್ರೇಣಿಗಳ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸುವ ಮೂಲಕ ಎಲ್ಲಾದರೂ ಜನ ಸಂಚಾರ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಅದರಲ್ಲೂ ಪ್ರಮುಖವಾಗಿ ಅತಿ ಹೆಚ್ಚು ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಶ್ರೇಣಿ, ಚುರ್ಚೆಗುಡ್ಡ, ಕಳಸಾಪುರ, ಬಿದಿರುತಳ ಹೀಗೆ ಹಲವು ಪ್ರದೇಶಗಳಲ್ಲಿ ಡ್ರೋಣ್ ಕಾರ್ಯಾಚರಣೆ ಆರಂಭಗೊAಡಿದೆ. ಈ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಡ್ರೋಣ್ ಹಾರಿಸಲಾಗುತ್ತಿದೆ. ಎಲ್ಲಿಯಾದರೂ ಜನ ಇರುವುದು ಕಂಡಲ್ಲಿ ಅವರ ಚಟುವಟಿಕೆಗಳ ಕುರಿತು ಡ್ರೋಣ್ ಮೂಲಕವೇ ವೀಡಿಯೋ ಸಂಗ್ರಹ ಮಾಡಲಾಗುತ್ತಿದೆ. ಒಂದು ವೇಳೆ ಇಂಥ ಪ್ರದೇಶಗಳಲ್ಲಿ ಯಾರಾದರೂ ಬೆಂಕಿ ಬಳಕೆ ಮಾಡುತ್ತಿದ್ದುದು ಕಂಡು ಬಂದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಪ್ರವಾಸಿಗರ ಮೇಲೆ ಹದ್ದಿನ ಕಣ್ಣು
ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲಿಯೂ ಚಂದ್ರದ್ರೋಣ ಪರ್ವತ ಶ್ರೇಣಿ ಹಾಗೂ ಮಲೆನಾಡು ಭಾಗಕ್ಕೆ ಹೆಚ್ಚಿನ ಜನ ಆಗಮಿಸುತ್ತಾರೆ. ಈ ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದ ಶೋಲಾ ಅರಣ್ಯವಿದೆ. ಜೊತೆಗೆ ಅಪರೂಪದಲ್ಲಿಯೇ ಅಪರೂಪವಾದ ಜೀವಸಂಕುಲವೂ ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿಯೇ ಚಂದ್ರದ್ರೋಣ ಪರ್ವತ ಶ್ರೇಣಿ ಹಾಗೂ ಮಲೆನಾಡು ಭಾಗಕ್ಕೆ ಆಗಮಿಸುವ ಪ್ರವಾಸಿಗರ ಮೇಲೆಯೂ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಪ್ರವಾಸಿಗರು ಶೋಲಾ ಹುಲ್ಲುಗಾವಲು ಪ್ರದೇಶದಲ್ಲಿ ಧೂಮಪಾನ ಮಾಡಿದಾಗ ಅಥವಾ ಅಡುಗೆ ಮಾಡಿಕೊಳ್ಳಲು ಮುಂದಾದಾಗ ಈಗಾಗಲೇ ಒಣಗಿ ನಿಂತಿರುವ ಹುಲ್ಲುಗಾವಲಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿಯೇ ಪ್ರವಾಸಿಗರ ಮೇಲೆಯೂ ಹೆಚ್ಚಿನ ನಿಗಾ ವಹಿಸಲಾಗಿದ್ದು, ಪ್ರವಾಸಿಗರಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.
ಹೆಚ್ಚಿನ ಸಿಬ್ಬಂದಿ ನಿಯೋಜನೆ
ಕಾಫಿನಾಡಿನಲ್ಲಿ ಕಾಡ್ಗಿಚ್ಚು ನಿಯಂತ್ರಿಸುವ ಉz್ದÉÃಶದಿಂದ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆಯೋ ಅಲ್ಲೆಲ್ಲಾ ಅರಣ್ಯ ಇಲಾಖೆ ಸಿಬ್ಬಂದಿ ಸಂಚಾರ ನಡೆಸುವ ಮೂಲಕ ಪ್ರವಾಸಿಗರಿಗೆ ಕಾಡ್ಗಿಚ್ಚಿನ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಇದಲ್ಲದೆ ಎಲ್ಲಿಯೇ ಬೆಂಕಿ ಕಾಣಿಸಿಕೊಂಡರೂ ಕೂಡಲೇ ಬೆಂಕಿ ನಂದಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಪ್ರತಿ ದಿನ ಒಂದಿಲ್ಲೊAದು ಕಡೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇಲಾಖೆಯ ತಲೆನೋವಿಗೆ ಕಾರಣವಾಗಿದೆ. ಹೀಗಾಗಿಯೇ ಪ್ರವಾಸಿಗರ ಜೊತೆಗೆ ಸ್ಥಳೀಯರ ಮೇಲೆಯೂ ಇಲಾಖೆ ಡ್ರೋಣ್ ಕಣ್ಗಾವಲಿಟ್ಟಿದೆ.
ಉz್ದÉÃಶಪೂರ್ವಕವಾಗಿ ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವ ಅನುಮಾನವಿದೆ. ಹೀಗಾಗಿಯೇ ಕಾಡಿಗೆ ಬೆಂಕಿ ಹಚ್ಚುವವರ ಪತ್ತೆಗಾಗಿ ಡ್ರೋಣ್ ಕ್ಯಾಮರಾ ಬಳಸಿ ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಅರಣ್ಯ ಪ್ರದೇಶ ಹಾಗೂ ಗಿರಿ ಶ್ರೇಣಿಗಳಲ್ಲಿ ಯಾರೇ ಬೆಂಕಿ ಬಳಕೆ ಮಾಡಿದರೂ ಅವರನ್ನು ಪತ್ತೆ ಮಾಡಲು ಡ್ರೋಣ ಸಹಾಯಕವಾಗುತ್ತದೆ. ಜೊತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕವೂ ಕಾಡ್ಗಿಚ್ಚು ತಡೆಯಲು ಕ್ರಮ ಕೈಗೊಂಡಿz್ದÉÃವೆ.
ರಮೇಶ್ ಬಾಬು, ಡಿಎಫ್ ಒ ಚಿಕ್ಕಮಗಳೂರು