ನಾಪೋಕ್ಲು: ಸಮೀಪದ ಕೋಕೇರಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಭತ್ತದ ಪೈರುಗಳು ನಾಶವಾಗಿದೆ.
ಗ್ರಾಮದ ಚಂಡೀರ ಈರಪ್ಪ ಎಂಬುವರ ಭತ್ತದ ಗದ್ದೆಗೆ ಶುಕ್ರವಾರ ನಾಲ್ಕು ಕಾಡಾನೆಗಳು ನುಗ್ಗಿ ಭತ್ತದ ಪೈರನ್ನು ತಿಂದು, ತುಳಿದು ನಾಶ ಮಾಡಿವೆ. ಕಾಡಾನೆಗಳ ನಿರಂತರ ದಾಳಿಯಿಂದ ಕಾಫಿ, ಬಾಳೆ, ಅಡಕೆ ತೋಟಗಳು ನಾಶವಾಗುತ್ತಿವೆ. ಭತ್ತದ ಗದ್ದೆಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರೂ ಕೆಲಸ ಮಾಡಲು ಒಪ್ಪುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಹಾವಳಿಗೆ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.