ಸುಂಟಿಕೊಪ್ಪ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹೊಸಮನೆ ಪೂವಯ್ಯ ಅವರ ತೋಟಕ್ಕೆ ನಿರಂತರವಾಗಿ ಕಾಡಾನೆಗಳ ದಾಳಿ ಮಾಡುತ್ತಿದ್ದು ಅಪಾರ ಬೆಳೆ ನಷ್ಟವಾಗಿದೆ.
ಆಹಾರ ಅರಸಿ ಬಂದ ಕಾಡಾನೆಗಳು ಕಾಫಿ, ಕರಿಮೆಣಸು, ಬಾಳೆ ತೋಟಗಳನ್ನು ಧ್ವಂಸಗೊಳಿಸಿವೆ. ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲಿನ ವೇಳೆಯಲ್ಲಿ ಓಡಾಡುತ್ತಿವೆ. ತೋಟಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ. ಅರಣ್ಯ ಇಲಾಖೆ ತೋಟಗಳಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.