ಸರಗೂರು: ತಾಲೂಕಿನ ಕೋತ್ತೆಗಾಲ ಗ್ರಾಮದಲ್ಲಿ ರೈತ ಸಿ.ತಿಮ್ಮಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕಾಡಾನೆಗಳು ಬುಧವಾರ ರಾತ್ರಿ ತಿಂದು ನಾಶ ಮಾಡಿವೆ.
ತೋಟಕ್ಕೆ ದಾಳಿಯಿಟ್ಟ ಆನೆಗಳು ಬಾಳೆ, ರಾಗಿ, ಜೋಳ ಫಸಲನ್ನು ನಾಶಪಡಿಸಿವೆ. ನಂತರ ಅದೇ ಗ್ರಾಮದ ಹಲವು ಜಮೀನಿಗೆ ನುಗ್ಗಿ ಕಟಾವಿಗೆ ಬಂದಿದ್ದ ಬಾಳೆ ಫಸಲನ್ನು ನಾಶ ಮಾಡಿವೆ. ಸಿ.ತಿಮ್ಮಯ್ಯ 3 ಎಕರೆಯಲ್ಲಿ ಬೆಳೆ ಬೆಳೆದಿದ್ದರು. ಕೆಲ ದಿನಗಳ ಹಿಂದೆ ಸುಮಾರು 20 ರಿಂದ 50ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿದ್ದವು.
ನಂತರ ಸರಗೂರು ವಲಯ ಅರಣ್ಯಾಧಿಕಾರಿ ಮಹಾಲಕ್ಷ್ಮೀ ಅವರಿಗೆ ಕರೆ ಮಾಡಿ ಬೆಳೆ ನಾಶವಾಗಿರುವ ಕುರಿತು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದ್ದೇವೆ ಎಂದರು.