ಜಿಲ್ಲೆ

ಕಾಡಾನೆಗಳ ದಾಳಿಗೆ ಬಾಳೆ ಬೆಳೆ ನಾಶ

ಮಳವಳ್ಳಿ: ತಾಲೂಕಿನ ದಬ್ಬಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಬಾಳೆ ತೋಟವನ್ನು ಸಂಪೂರ್ಣವಾಗಿ ನಾಶಮಾಡಿವೆ.

ಗ್ರಾಮದ ರಾಮಚಂದ್ರ ಅವರು ಒಂದು ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದು ಕಟಾವು ಹಂತದಲ್ಲಿದ್ದತ್ತು. ಸಮೀಪದ ಶಿಂಷಾ ಅರಣ್ಯ ಪ್ರದೇಶದಿಂದ ಆರೇಳು ಕಾಡಾನೆಗಳ ಗುಂಪು ದಾಳಿ ನಡೆಸಿ ಸುಮಾರು 200 ಗಿಡಗಳಿದ್ದ ಬಾಳೆ ತೋಟವನ್ನು ಸಂಪೂರ್ಣವಾಗಿ ತುಳಿದು ನಾಶಪಡಿಸಿವೆ. ಜಮೀನಿನ ಅಳವಡಿಸಿದ್ದ ಸುತ್ತ ಸೋಲಾರ್ ಫೆನ್ಸಿಂಗ್, ಅಡಕೆ ಬೆಳೆ ಗಿಡಗಳನ್ನು ಹಾಳು ಮಾಡಿವೆ ಎಂದು ರೈತ ರಾಮಚಂದ್ರ ತಿಳಿಸಿದ್ದಾರೆ.