ಮೆಣಸೂರು ಗ್ರಾಪಂ ಲಿಂಗಾಪುರ ಗ್ರಾಮದ ತೋಟದಲ್ಲಿ ಕಾಡಾನೆಗಳ ಗುಂಪು ಅಡಕೆ ಮರಗಳನ್ನು ಮುರಿದುಹಾಕಿರುವುದು.  
ಜಿಲ್ಲೆ

ಕಾಡಾನೆಗಳ ದಾಳಿಗೆ ಅಡಕೆ, ತೆಂಗಿನ ತೋಟ ಧ್ವಂಸ

ಎನ್.ಆರ್.ಪುರ: ಮೆಣಸೂರು ಗ್ರಾಮ ಪಂಚಾಯಿತಿ ಲಿಂಗಾಪುರ ಗ್ರಾಮದ ಚಂದ್ರಪ್ಪ ಎಂಬುವರ ಅಡಕೆ ತೋಟಕ್ಕೆ ಗುರುವಾರ 30 ಕಾಡಾನೆಗಳ ಹಿಂಡು ದಾಳಿ ಮಾಡಿ ಅಡಕೆ, ತೆಂಗಿನ ಗಿಡಗಳನ್ನು ಧ್ವಂಸಮಾಡಿದೆ.

ಗುರುವಾರ ಬೆಳಗ್ಗೆ ಹಿಳುವಳ್ಳಿ ಕಡೆಗೆ ಕಾಡಾನೆಗಳು ಸಾಗಿದ್ದವು. ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಅರಣ್ಯ ರಕ್ಷಕರಾದ ಪ್ರವೀಣ್, ಲೋಹಿತ್, ಎಲಿಫೆಂಟ್‌ಟಾಸ್ಕ್ ಫೋರ್ಸ್ ಉಪ ವಲಯ ಅರಣ್ಯಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ಸೇರಿ ಪಟಾಕಿ ಸಿಡಿಸಿ ಕಾಡಾನೆಗಳ ಹಿಂಡನ್ನು ಸಮೀಪದ ಮಂಡಲ ಕಾಡಿಗೆ ಅಟ್ಟಿದರು. ಪಟ್ಟಣದಿಂದ 3 ಕಿ.ಮೀ. ದೂರದ ಮಂಡಲ ಕಾಡಿನಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಹಗಲು ಮಂಡಲ ಕಾಡಿನಲ್ಲಿದ್ದು ರಾತ್ರಿ ಅಡಕೆ ತೋಟಕ್ಕೆ ನುಗ್ಗುತ್ತಿವೆ.