ಜಿಲ್ಲೆ

ಕಾಡಾನೆ ದಾಳಿಗೆ ಅಪಾರ ಬೆಳೆ ನಾಶ

ಬೂದಿಕೋಟೆ: ಬೂದಿಕೋಟೆ ಹೋಬಳಿಯ ತಮಟವಾಕನಹಳ್ಳಿ, ಬೀಮಗಾನಹಳ್ಳಿ, ಗುಲ್ಲಹಳ್ಳಿ ಹಾಗೂ ಸುತಮುತ್ತಲಿನ ಗ್ರಾಮಗಳಿಗೆ ಎರಡು ದಿನಗಳಿಂದ ಕಾಡಾನೆ ಹಿಂಡು ದಾಳಿ ವಾಡಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ, ಶೇಂಗಾ, ಚೆಂಡು ಹೂ, ಬದನೆಕಾಯಿ, ನೀರಿನ ಪೈಪ್‌ಗಳನ್ನು ನಾಶ ಮಾಡಿವೆ.

ಬಲಮಂದೆ ಗ್ರಾಪಂ ವ್ಯಾಪ್ತಿಯ ಭೀಮಗಾನಹಳ್ಳಿಯ ರೈತ ವೆಂಕಟೇಶಪ್ಪ ಅವರ ಎರಡು ಎಕರೆ ಟೊಮ್ಯಾಟೊ, 2 ಎಕರೆ ಚೆಂಡು ಹೂವು. ಗಾಡೆಪ್ಪ ಆವರ 1 ಎಕರೆ ಸಜ್ಜೆ, ಬದನೆ. ತಮಟವಾಕನಹಳ್ಳಿಯ ವರದರಾಜಪ್ಪ ಎಂಬುವವರ 2 ಎಕರೆ ಟೊಮ್ಯಾಟೊ, 2 ಎಕರೆ ಶೇಂಗಾ, ತಾನಾಜಿರಾವ್ ಅವರ ಒಂದೂವರೆ ಎಕರೆ ಟೊಮ್ಯಾಟೊ, ಗುಲ್ಲಹಳ್ಳಿ ರೈತ ರಾಮಚಂದ್ರಪ್ಪ ಅವರ ಎರಡು ಎಕರೆ ಶೇಂಗಾ ಬೆಳೆ ಸೇರಿ ಹಲವೆಡೆ ಬೆಳೆ ನಾಶ ವಾಡಿದ್ದು, ದಿನ್ನೂರು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ.

ಪ್ರತಿ ವರ್ಷ ಕಾಡಾನೆ ದಾಳಿ ವಾಡಿ ಬೆಳೆ ನಾಶಮಾಡುತ್ತಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ಸಿಗದೆ ರೈತರು ಸಾಲಗಾರರಾಗುತ್ತಿದ್ದಾರೆ. ಆನೆ ದಾಳಿ ತಡೆಯಲು ಕೂಡಲೆ ಆನೆ ಕಾರಿಡಾರ್ ಯೋಜನೆ ಪ್ರಾರಂಭಿಸಬೇಕು. ರಾಮಚಂದ್ರಪ್ಪ ರೈತ ಗುಲ್ಲಹಳ್ಳಿ