ಶಹಾಬಾದ್ ತಾಲೂಕಿನ ಮಾಲಗತ್ತಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಹಿರೋಡೇಶ್ವರ ದೇವಸ್ಥಾನದ ಶ್ರೀ ಚನ್ನಬಸವ ಶರಣರ ಜನ್ಮದಿನ, ಗುರುವಂದನೆ ಕಾರ್ಯಕ್ರಮವನ್ನು ಚಿತ್ತಾಪುರದ ಶ್ರೀ ಸೋಮಶೇಖರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಡಾ.ಮಲ್ಲಣ್ಣಪ್ಪ ಮಹಾರಾಜ, ಅಲ್ಲಮಪ್ರಭು ಪಾಟೀಲ್ ಇತರರಿದ್ದರು. 
ಜಿಲ್ಲೆ

ಕಾಡನ್ನು ಸುಕ್ಷೇತ್ರವಾಗಿಸಿದ ಚನ್ನಬಸವ ಶ್ರೀ

ಶಹಾಬಾದ್: ಸುತ್ತಲೂ ಗಿಡಗಂಟಿಗಳಿAದ ಆವೃತ್ತವಾಗಿ ಕಾಡಿನಂತಿದ್ದ ಹಿರೋಡೇಶ್ವರ ದೇವಸ್ಥಾನವನ್ನು ಸುಕ್ಷೇತ್ರವನ್ನಾಗಿಸಿದ ಕೀರ್ತಿ ಶ್ರೀ ಚನ್ನಬಸವ ಶರಣರಿಗೆ ಸಲ್ಲುತ್ತದೆ ಎಂದು ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.

ಮಾಲಗತ್ತಿಯ ಹಿರೋಡೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಚನ್ನಬಸವ ಶರಣರ ೫೯ನೇ ಜನ್ಮದಿನ, ಗುರುವಂದನೆ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಪೂಜ್ಯರ ಸತತ ಪ್ರಯತ್ನ, ಭಕ್ತರ ಸಹಕಾರದಿಂದ ಇಂದು ಉತ್ತರ ಕರ್ನಾಟಕದ ಕುಕ್ಕೆಯಾಗಿ ಮಾಲಗತ್ತಿ ಪ್ರಸಿದ್ಧಿ ಪಡೆದಿದೆ ಎಂದರು.

ತೊನಸನಳ್ಳಿ(ಎಸ್)ಯ ಶ್ರೀ ಡಾ.ಮಲ್ಲಣ್ಣಪ್ಪ ಸ್ವಾಮೀಜಿ, ಪೇಠಶಿರೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಜಯಶ್ರೀ ಮಾತಾ, ಶಾಸಕ ಅಲ್ಲಮಪ್ರಭು ಪಾಟೀಲ್, ಪ್ರಮುಖರಾದ ಮಲ್ಲಣ್ಣ ಸಣಮೋ, ಡಾ.ಜಗನ್ನಾಥ ಬಿಜಾಪುರ, ಬಸವರಾಜ ಬೆಣ್ಣೂರ, ಶಿವಣ್ಣಗೌಡ ಕನಗನಳ್ಳಿ, ಡಾ.ಗುಂಡಣ್ಣ ಬಾಳಿ, ನಾಗಯ್ಯಸ್ವಾಮಿ, ಶಿವನಗೌಡ ಪೊಲೀಸ್ ಪಾಟೀಲ್, ವೀರಣ್ಣ ಯಾರಿ, ಧರ್ಮರಾಜ ಸಣಮೋ, ಭೀಮಶಾ ಜೀರೊಲ್ಳಿ, ವಿಶ್ವನಾಥ ಪಾಳಾ, ಮಲ್ಲು ರಾಜೊಳ್ಳಿ, ಬಾಲಕೃಷ್ಣ ಜೋಶಿ, ಶಿವಾನಂದ ಅಲ್ಲೂರ, ಮಲ್ಲಣ್ಣ ಅಲ್ಲೂರ, ಬಾಲಪ್ಪ ಪೂಜಾರಿ, ರವಿ ಯರಗೋಳ, ಬಸವರಾಜ ಹಾಲಿನ್, ಸಿದ್ದಪ್ಪ ಅಲ್ಲೂರ, ಶಿವಪ್ಪ ಬಾಳಕ, ರಮೇಶ ತಳವಾರ, ಸಿದ್ದು ರೇಷ್ಮೆ, ಸುರೇಶ ಪಂಚಾಳ ಇತರರಿದ್ದರು.

ಭಕ್ತರು ಶ್ರೀ ಚನ್ನಬಸವ ಶರಣರು ಹಾಗೂ ಶ್ರೀ ಜಗದೇವಿ ತಾಯಿ ದಂಪತಿಯನ್ನು ಸತ್ಕರಿಸಿ ಆಶೀರ್ವಾದ ಪಡೆದರು. ಕಲ್ಲಯ್ಯ ಸ್ವಾಮಿ ಬಡದಳ್ಳಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಣೇಶ ಶಹಾಪುರ ತಬಲಾ ಸಾಥ್ ನೀಡಿದರು. ದಿವ್ಯಾ, ಭಾಗ್ಯಶ್ರೀ, ಪ್ರತೀಕ್ಷಾ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು. ಮಲ್ಲಿಕಾರ್ಜುನ ಇಟಗಿ ಸ್ವಾಗತಿಸಿದರು. ಈಶ್ವರ ಮುಗುಳನಾಗಾವ ನಿರೂಪಣೆ ಮಾಡಿ ವಂದಿಸಿದರು.