ಜಿಲ್ಲೆ

ಕಾಟಿಪಳ್ಳ ಕೊಲೆಯತ್ನ ಆರೋಪಿಗಳ ಬಂಧನ

ಮಂಗಳೂರು: ನಗರದ ಹೊರ ವಲಯದ ಸುರತ್ಕಲ್ ಕಾಟಿಪಳ್ಳ ಎರಡನೇ ಬ್ಲಾಕ್ ನಲ್ಲಿ ಫೆ.10 ರಂದು ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಕೊಲೆಯತ್ನ ಪ್ರಕರಣದ ಒಂಭತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶಾಂತ ಭಂಡಾರಿ, ಶಾಕೀಬ್,ಶೈಲೇಶ್ ಪೂಜಾರಿ,ಹನೀಫ್ ಹಾಗೂ ಪರೋಕ್ಷವಾಗಿ ಸಹಕರಿಸಿದ ಸುನಿಲ್ ಕಾಂಚನ್,ಲಕ್ಷ್ಮಶ, ಅಹ್ಮದ್ ಸಾದಿಕ್,ನಿಸಾರ್ ಹುಸೇನ್, ರಂಜನ್ ಶೆಟ್ಟಿ ಎಂಬವರನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.