ಸೇಡಂ: ಹಾಬಾಳ(ಟಿ) ಗ್ರಾಮದ ಕಾಗಿಣಾ ನದಿ ದಂಡೆಯಲ್ಲಿ ಶನಿವಾರ ಅಪರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆಲ ದಿನ ಹಿಂದೆ ಕಾಗಿಣಾ ನದಿ ತುಂಬಿ ಹರಿದಿತ್ತು. ಆ ವೇಳೆ ಶವ ನೀರಿನಲ್ಲಿ ಕೊಚ್ಚಿಕೊಂಡು ಬಂದು ಜೇಕುಗಳ ಮಧ್ಯೆ ಸಿಲುಕಿದೆ. ಇದೀಗ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಜನರಿಗೆ ಶವ ಕಂಡಿದ್ದು, ಮಾಹಿತಿ ಸಿಗುತ್ತಿದ್ದಂತೆ ಪಿಎಸ್‌ಐ ಅರ್ಜುನಪ್ಪ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಬಹಳ ದಿನ ನೀರಿನಲ್ಲಿದ್ದ ಕಾರಣಕ್ಕೆ ಶವ ಸಂಪೂರ್ಣ ಕೊಳೆತಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಗ್ರಾಪಂ ಸಹಾಯದಿಂದ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.