ಜಿಲ್ಲೆ

ಕಾಂಬಳೆವಾಡಿ ಸಮಗ್ರ ಅಭಿವೃದ್ಧಿಗೆ ಪ್ರಯತ್ನ

ಬಸವಕಲ್ಯಾಣ: ಕಾಂಬಳೆವಾಡಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಭಕ್ತಿ-ಶ್ರದ್ಧೆಯಿಂದ ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಮದ ಆದಿನಾಥೇಶ್ವರ ಮಂದಿರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಧೆ, ಶ್ರೀ ಕೃಷ್ಣನ ವೇಷ ಭೂಷಣದಲ್ಲಿ ಮಕ್ಕಳು ನೃತ್ಯ ಮಾಡಿ ಗಮನ ಸೆಳೆದರು.
ಶಾಸಕ ಶರಣು ಸಲಗರ ಮಾತನಾಡಿ, ಧರ್ಮ ಆಧ್ಯಾತ್ಮದ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರೂ ಜೀವನದಲ್ಲಿ ಸದ್ಗುಣ ಬೆಳೆಸಿಕೊಳ್ಳಬೇಕು. ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಕಾಂಬಳೆವಾಡಿ ಗ್ರಾಮದ ಸಮಗ್ರ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಉಪನ್ಯಾಸಕ ಶಿವಾನಂದ ದಾಡಗಿ ಉಪನ್ಯಾಸ ನೀಡಿ, ಜಗತ್ತಿಗೆ ಧರ್ಮ ಅಧ್ಯಾತ್ಮ ಪರಿಕಲ್ಪನೆ ನೀಡಿದ ಭಾರತ ವಿಶ್ವದಲ್ಲೆ ಶ್ರೇಷ್ಠ ನೆಲವಾಗಿದೆ. ಸನಾತನ ಧರ್ಮ ಸಂಸ್ಕೃತಿಯ ಆಚರಣೆಗಳು ಯಾರು ಮರೆಯಬಾರದು ಎಂದರು.
ಸಾಧಕರಿಗೆ ಸನ್ಮಾನ: ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ರಾಜಕುಮಾರ ಕಾಂಬಳೆ, ನಿವೃತ್ತ ಸರ್ಕಾರಿ ನೌಕರರು, ಸರ್ಕಾರಿ ಸೇವೆಗೆ ನೇಮಕವಾದವರು ಮತ್ತು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೃಷ್ಣ ಪಿಲ್ಮಂಗೋಲೆ ಸ್ವಾಗತಿಸಿದರು, ಭಾಗವತ ಬೌದ್ದೆ ನಿರೂಪಣೆ ಮಾಡಿದರು.
ಮುಖಂಡ ಶಾಹುರಾಜ ಪಾಸ್ಮೆ ಅಧ್ಯಕ್ಷತೆ ವಹಿಸಿದರು. ಜಿಪಂ ಮಾಜಿ ಉಪಾಧ್ಯಕ್ಷೆ ಸುಕುಮಾರಬಾಯಿ ಗೋರಲೆ, ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಲೋಡ್ಡೆ, ಉಪಾಧ್ಯಕ್ಷೆ ಶೀಲಾಬಾಯಿ ತ್ರೀಮುಖೆ, ಪ್ರಮುಖರಾದ ಭಾಗವತ ಬಿ, ಬಲಭೀಮ ಕಾಂಬಳೆ, ಮಹಾಪೂರಿ ಸೂರ್ಯವಂಶಿ, ಶ್ರೀನಿವಾಸ ಕಾಂಬಳೆ, ಶ್ರೀನಿವಾಸ ಪಾಸ್ಮೆ, ಅನೀಲ ಪುಣೆ, ಜಾಲಿಂದರ ಗೋರಲೆ, ಮಾಣಿಕ ಪಾಸ್ಮೆ, ರಾಘವೇಂದ್ರ, ಹರಿಕಿಶನ್ ಪಾಶ್ಮೆ, ಶ್ರೀನಿವಾಸ ಪಾಶ್ಮೆ, ಮದನ ಭೋಸಗಾ, ಭೀಮಾಶಂಖರ ಇತರರಿದ್ದರು.
ಕಾಮಗಾರಿಗೆ ಚಾಲನೆ: ಕಾರ್ಯಕ್ರಮಕ್ಕೂ ಮುನ್ನ ಕಾಂಬಳೆ ವಾಡಿ ಗ್ರಾಮದಲ್ಲಿ ಕೆಎನ್‌ಎನ್‌ಎಲ್ ಯೋಜನೆಯಡಿ ೭೫ ಲಕ್ಷ ರೂ. ಅನುದಾನದಲ್ಲಿ ರೈತ ಭವನ ಸಮುದಾಯಕ್ಕೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು.