ಜಿಲ್ಲೆ

ಕಾಂಪೌಂಡ್ ಗೆ ಗುದ್ದಿದ ಮಾರುತಿ ವ್ಯಾನ್; ಇಬ್ಬರ ಸಾವು

ತುಮಕೂರು: ಬುಧವಾರ ತಡರಾತ್ರಿ ನಗರ ಮಂಡಿಪೇಟೆ ಕಡೆಯಿಂದ ಬರುತ್ತಿದ್ದ ಮಾರುತಿ ವ್ಯಾನ್ ಹೊರಪೇಟೆಯಲ್ಲಿರುವ ಬೆಸ್ಕಾಂ ಸೆಕ್ಯೂರಿಟಿ ಕಾಂಪೌAಡ್‌ಗೆ ಡಿಕ್ಕಿಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ತುಮಕೂರಿನ ದೀಪು(36 ವರ್ಷ) ಹಾಗೂ ಚಾಲಕ ಖಾಸಿಂ(25) ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬ 22 ವರ್ಷದ ಮಂಜುನಾಥ ಗಾಯಗೊಂಡಿದ್ದು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.