ಜಿಲ್ಲೆ

ಕಾಂಗ್ರೇಸ್-ಜೆಡಿಎಸ್ ಮುಖಂಡರು ಬಿಜೆಪಿಗೆ

ರಿಪ್ಪನ್‍ಪೇಟೆ: ಮಳವಳ್ಳಿ ಗ್ರಾಮದ ಜೆಡಿಎಸ್ ಮುಖಂಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಗೋಪಾಲಣ್ಣ, ಬೆಂಬಲಿಗರಾದ ರಮೇಶ, ಉಮಾಪತಿ, ಪ್ರಶಾಂತ, ವೀರೇಶ ಹಾಗೂ ರಿಪ್ಪನ್‍ಪೇಟೆ ಶಬರೀಶನಗರದ ಕಾಂಗ್ರೆಸ್ ಮುಖಂಡ ಮಂಜನಾಯ್ಕ, ಗ್ರಾಪಂ ಮಾಜಿ ಸದಸ್ಯೆ ಗಿರಿಜಾ ನಾಯಕ್ ಮಂಗಳವಾರ ಶಾಸಕ ಹರತಾಳು ಹಾಲಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಗ್ರಾಪಂ ಅಧ್ಯಕ್ಷೆ ಮಂಜುಳಾ, ಉದ್ಯಮಿ ನಾಗರಾಜ ಶೆಟ್ಟಿ, ಮುಖಂಡರಾದ ಆರ್.ಟಿ.ಗೋಪಾಲ್, ಎಂ.ಬಿ.ಮಂಜುನಾಥ, ಸು„ೀಂದ್ರ ಪೂಜಾರಿ, ಕೇತಾರ್ಜಿರಾವ್, ನಿರೂಪಕುಮಾರ್ ಇದ್ದರು.

ಅಡಕೆ ತೋಟಕ್ಕೆ ಭೇಟಿ: ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರದ ನಾಗರಾಜ ಎಂಬುವರ ಬೆಂಕಿಗೆ ಆಹುತಿಯಾದ ಅಡಕೆ ತೋಟ ಮತ್ತು ಬಸವಾಪುರ ಗ್ರಾಮದ ಸೂಡೂರು ರಾಘವೇಂದ್ರ ಅವರ ಮನೆಯಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ 300 ಪಿಂಡಿ ಹುಲ್ಲಿನ ಬಣವೆಗೆ ಬೆಂಕಿಗೆ ಆಹುತಿಯಾಗಿದ್ದು ಪಟ್ಟಣದ ರಾಮನಗರ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಸುರೇಶ ಎಂಬುವರ ಗ್ಯಾರೇಜಿಗೆ ಬೆಂಕಿ ತಗಲಿ ದುರಸ್ತಿಗೆ ಬಂದಿದ್ದ ಲಾರಿ ಸುಟ್ಟಿದ್ದು ಈ ಎಲ್ಲ ಸ್ಥಳಗಳಿಗೆ ಶಾಸಕ ಹರತಾಳು ಹಾಲಪ್ಪ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ನಾಗರಾಜ ಹಾಗೂ ರಾಘವೇಂದ್ರ, ಸುರೇಶ ಅವರಿಗೆÉ ವೈಯುಕ್ತಿಕ ಧನ ಸಹಾಯ ನೀಡಿ ಸಾಂತ್ವನ ಹೇಳಿದರು.