ಜಿಲ್ಲೆ

ಕಾಂಗ್ರೆಸ್​ನಲ್ಲಿ ಎಲ್ಲರೂ ಸಿಎಂ ಸ್ಥಾನಕ್ಕೆ ನಾನು ನಾನು ಅಂತಾ ಅರ್ಜಿ ಹಾಕಿದ್ದಾರೆ - ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ

ಬೆಳಗಾವಿ: ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವದಲ್ಲೇ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ೂಷಿಸಬೇಕು ಎಂದು ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾರೆ. ಇನ್ನು ಮುಂದೆ ಆಗುವುದಿಲ್ಲ ಎಂದರು. ಕಾಂಗ್ರೆಸ್​ ಅಸ್ತಿತ್ವ ಕಳೆದುಕೊಂಡ ಪ. ಅದಕ್ಕೆ ವಿಚಾರ, ಧ್ಯೇಯೋದ್ದೇಶಗಳ ಸ್ಪಷ್ಟತೆ ಇಲ್ಲ. ಭ್ರಷ್ಟಾಚಾರ ತಾಂಡವವಾಡಲು ಮೂಲ ಪುರುಷರು, ಕಾರಣಿಕರ್ತರು ಕಾಂಗ್ರೆಸ್​ ಪದವರು ಎಂದು ದೂರಿದರು.

ಡಿಕೆಶಿ, ಸಿದ್ದರಾಮಯ್ಯ ಯಾವ ವಿಚಾರದಲ್ಲಿ ಒಂದಾಗುತ್ತಾರೆ? ಯಾವ ತತ್ವ, ಯಾವ ಮೌಲ್ಯದ ಮೇಲೆ ಒಂದಾಗುತ್ತಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್​ನಲ್ಲಿ ಎಲ್ಲರೂ ಸಿಎಂ ಸ್ಥಾನಕ್ಕೆ ನಾನು ನಾನು ಅಂತಾ ಅರ್ಜಿ ಹಾಕಿದ್ದಾರೆ. ವಯಸ್ಸಾದವರು, ಯುವಕರು, ಮಧ್ಯಮ ವಯಸ್ಸಿನವರು ಅರ್ಜಿ ಹಾಕಿದ್ದಾರೆ. ಈಗಿನ ಕಾಲಕ್ಕೆ ಇವರೆಲ್ಲ ಸಂಪೂರ್ಣವಾಗಿ ಅಪ್ರಸ್ತುತವಾಗಿದ್ದಾರೆ. ಅವರು ಈಗ ಮಾರ್ಗದರ್ಶಿಗಳಾಗಿ ಆಶೀರ್ವಾದ ಮಾಡಿಕೊಂಡು ಇರಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್​ ನೀಡಿದರು.

ಸಿದ್ದರಾಮಯ್ಯ ಅಮೃತ ಮಹೋತ್ಸವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಪ ನಾಯಕ ಸಿದ್ದರಾಮಯ್ಯರ ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು. ಸಿದ್ದರಾಮಯ್ಯಗೆ ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಅಂತ ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಪದ ನಾಯಕನ ಯಾವುದೇ ಕಾರ್ಯಕ್ರಮ ಇದ್ದರೂ ರಾಜಕೀಯ ಕಾರ್ಯಕ್ರಮವೇ ಆಗುತ್ತದೆ ಎಂದರು.

ಕೋರೆ ಎಲ್ಲ ಸ್ಥಾನಕ್ಕೂ ಅರ್ಹರು: ಕೆಎಲ್​ಇ ಸಂಸ್ಥೆ ದೇಶದಲ್ಲಿ ಗುಣಮಟ್ಟದ ಶಿಣ, ಆರೋಗ್ಯ ಸೇವೆ ನೀಡುತ್ತಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಸಂಸ್ಥೆಯನ್ನು ಅಚ್ಚುಕಟ್ಟಾಗಿ ಕಟ್ಟಿದ್ದಾರೆ. ನಮ್ಮೆಲ್ಲರಿಗೂ ಸಂಸ್ಥೆ ಪ್ರೇರಣೆಯಾಗಿದೆ. ಕೋರೆ ಅವರು ಎಲ್ಲ ಸ್ಥಾನ ಅಲಂಕರಿಸಲು ಅರ್ಹ ಮತ್ತು ಯೋಗ್ಯರಿದ್ದಾರೆ ಎಂದು ಸಚಿವ ಡಾ. ಸಿ.ಎನ್​.ಅಶ್ವತ್ಥ ನಾರಾಯಣ ಹೇಳಿದರು. ಅವರಿಗೆ ರಾಜಕೀಯದಲ್ಲಿ ಒಳ್ಳೆಯ, ಇನ್ನೂ ಹೆಚ್ಚಿನ ಸ್ಥಾನ ಸಿಗಲಿ ಎಂದು ಬಯಸುತ್ತೇನೆ ಎಂದರು.

ಡಾ.ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವವನ್ನು ಅಭಿಮಾನಿಗಳು ಮಾಡಲಿ. ಬೆಂಗಳೂರಿನಲ್ಲಿರುವ ನಾವೂ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ಕೆಎಲ್​ಇ ಡೀಮ್ಡ್​ ವಿವಿ ನಮ್ಮೆಲ್ಲರ ಅಭಿಮಾನದ ವಿಶ್ವವಿದ್ಯಾಲಯ. ಕೆಎಲ್​ಇ ವಿವಿಯ 12ನೇ ಟಿಕೋತ್ಸವ ಅದ್ಭುತವಾಗಿ ನಡೆದಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಕೆಎಲ್​ಇ ಸಂಸ್ಥೆ ರಾಜಮಾರ್ಗವಾಗಿದೆ ಎಂದರು.