ತಿ.ನರಸೀಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಚೈತನ್ಯ ನೀಡಲು ರಾಷ್ಟ್ರೀಯ ಅಹಿಂದ ಒಕ್ಕೂಟದ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕುಪ್ಪರವಳ್ಳಿ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬುಧವಾರ ರಾಷ್ಟ್ರೀಯ ಅಹಿಂದ ಒಕ್ಕೂಟದ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದರು. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಎರಡನೇ ಹಂತದ ನಾಯಕತ್ವ ಬೆಳೆಯಬೇಕು. ಯುವ ಜನತೆಯಲ್ಲಿ ನಾಯಕತ್ವ ಬೆಳೆಯುವಲ್ಲಿ ಅಹಿಂದ ಸಂಘಟನೆ ಸೂಕ್ತ ಮಾರ್ಗದರ್ಶನ ನೀಡಲಿದೆ. ರಾಜಕೀಯ ಚಿಂತನೆಗಳನ್ನು ಉತ್ತಮ ಕಾರ್ಯಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಪದಾಧಿಕಾರಿಗಳು ಸಮಾಜವನ್ನು ಶೈಕ್ಷಣಿಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಾಯಕನಹಳ್ಳಿ ಕುಮಾರ್ ರಾಮೇಗೌಡ ಮಾತನಾಡಿ, ಅಂಬೇಡ್ಕರ್ ವಿಚಾರಗಳಲ್ಲಿ ನಂಬಿಕೆಯಿಟ್ಟು, ಡಿ.ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ನಾಯಕರ ಪ್ರೇರಣೆಯಿಂದ ಅಹಿಂದ ಸಂಘಟನೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು. ತಿ.ನರಸೀಪುರ ಹಾಗೂ ವರುಣ ಕ್ಷೇತ್ರ ಒಳಗೊಂಡ ತಾಲೂಕಿನಲ್ಲಿ ಯುವಕರಿಗೆ ರಾಜಕೀಯವಾಗಿ ಹೆಚ್ಚಿನ ಆದ್ಯತೆ ಸಿಗಬೇಕು. ನಮ್ಮ ರಾಷ್ಟ್ರೀಯ ಅಹಿಂದ ಒಕ್ಕೂಟ ಒಂದು ಒಳ್ಳೆಯ ವೇದಿಕೆಯಾಗಿದ್ದು, ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ಪ್ರಬಲ ನಾಯಕತ್ವ ಗುಣಗಳಿರುವ ಅಭ್ಯರ್ಥಿಗಳನ್ನು ಮುಂದಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಪಾಪಣ್ಣ, ಉಪಾಧ್ಯಕ್ಷ ಬೀರೇಶ್ ಕೇಬ್ಬೆಹುಂಡಿ, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ತಲಕಾಡು ಸುಂದರ್ ನಾಯಕ, ಮೈಸೂರು ನಗರಾಧ್ಯಕ್ಷ ದೀಪಕ್ ಪುಟ್ಟಸ್ವಾಮಿ ಇದ್ದರು.
ಪದಾಧಿಕಾರಿಗಳ ಆಯ್ಕೆ:
ಸಭೆಯಲ್ಲಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೋಸಲೆ ದೇವರಾಜ್(ಅಧ್ಯಕ್ಷ), ಹೆಳವರಹುಂಡಿ ಅರುಣ್‌ಗೌಡ (ಗೌರವಾಧ್ಯಕ್ಷ), ಸೋಮು ದಾದ (ಪ್ರಧಾನ ಕಾರ್ಯದರ್ಶಿ), ಎಂ.ಲೋಹಿತ್ ಗೌಡ, ಮೊಯಿನ್ ಮೊಹಮ್ಮದ್ ಖಾನ್ (ಉಪಾಧ್ಯಕ್ಷ), ಅಶ್ವಿನ್ ಕುಮಾರ್ (ಕಾರ್ಯಾಧ್ಯಕ್ಷ), ಬೆಳ್ಳಿರಾಜು(ಕಾರ್ಯದರ್ಶಿ), ಬೆನಕನಹಳ್ಳಿ ಅರುಣ್ (ಸಂಘಟನಾ ಕಾರ್ಯದರ್ಶಿ), ಗೋಪಾಲ್ ರಾಜ್ (ಪ್ರಚಾರ ಸಮಿತಿ ಅಧ್ಯಕ್ಷ), ಶಬ್ಬೀಲ್ ಖಾನ್ (ಸಹ ಕಾರ್ಯದರ್ಶಿ), ಕೇತಹಳ್ಳಿ ಹರೀಶ್ (ಪ್ರಚಾರ ಸಮಿತಿ ಉಪಾಧ್ಯಕ್ಷ), ಕುಮಾರ್ ಚಿದರಹಳ್ಳಿ (ಮಾಧ್ಯಮ ಕಾರ್ಯದರ್ಶಿ), ಬಸವರಾಜ್ ಮುತ್ತತ್ತಿ (ಮಾಧ್ಯಮ ಸಹ ಕಾರ್ಯದರ್ಶಿ), ಮುದ್ದುಬೀರನಹುಂಡಿ ಮಹೇಶ, ಚಿನ್ನಸ್ವಾಮಿ ವಾಟಾಳ್, ಮಹೇಶ್ ಕುಮಾರ್ (ಸಂಚಾಲಕ), ಭರತ್ ರಾಜ್ ತಲಕಾಡು(ಯುವ ಅಧ್ಯಕ್ಷ), ಶಿವರಾಜ್ ಕುರುಬೂರು(ಯುವ ಉಪಾಧ್ಯಕ್ಷ), ಬಿ.ಎಸ್.ಮಹೇಶ್ ಲೋಕು(ಖಜಾಂಚಿ).