ಹುಣಸೂರು ನಗರದ ವಕೀಲರ ಸಂಘದ ಕಚೇರಿಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಮತಯಾಚನೆ ಮಾಡಿದರು. ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ, ಮುರಳೀದರ್, ಶ್ರೀನಿವಾಸ್ ಇತರರಿದ್ದರು. 
ಜಿಲ್ಲೆ

ಕಾಂಗ್ರೆಸ್‌ಗೆ ಪ್ರಜ್ಞಾವಂತ ಮತದಾರರ ಒಲವು

ಹುಣಸೂರು: ತಾಲೂಕಿನ ಪ್ರಜ್ಞಾವಂತ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಕಡೆಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ಅಭಿವೃದ್ಧಿಗಾಗಿ ನನ್ನಲ್ಲಿ ಇನ್ನಷ್ಟು ಕನಸುಗಳಿವೆ. ಆ ಕನಸುಗಳನ್ನು ಸಾಕಾರಗೊಳಿಸಲು ಈ ಬಾರಿಯೂ ತಾಲೂಕಿನ ಜನತೆ ನನ್ನ ಬೆಂಬಲಕ್ಕೆ ನಿಲ್ಲಬೇಕು. ತಾಲೂಕಿನ ಪ್ರಜ್ಞಾವಂತ ಮತದಾರರು ಯಾವುದೇ ಆಸೆ, ಆಮಿಷ ಮತ್ತು ಬಣ್ಣದ ಮಾತಿಗೆ ಮರುಳಾಗುವವರಲ್ಲ. ಕಳೆದ 15 ವರ್ಷಗಳ ನನ್ನ ಅಭಿವೃದ್ಧಿಕಾರ್ಯಗಳನ್ನು ಗಮನಿಸಿ, ತಪ್ಪು ಒಪ್ಪುಗಳನ್ನು ಪರಾಮರ್ಶಿಸಿ ಮತ ಚಲಾಯಿಸಿರಿ ಎಂದರು.

ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ, ಕಾರ್ಯದರ್ಶಿ ಪಿ.ಶ್ರೀನಿವಾಸ್, ವಕೀಲರಾದ ಚನ್ನಬಸಪ್ಪ, ಶಿವಪ್ಪ, ಎಂ.ಆರ್.ಹರೀಶ್, ಪುಟ್ಟರಾಜು, ವಿ.ಜಿ.ಮುರಳೀಧರ್, ಮಂಜು, ಲಕ್ಷ್ಮಣ್, ಚಂದ್ರಶೇಖರ್ ಇತರರು ಇದ್ದರು.