ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಿಲ್ಲಾ ಎಸ್‌ಸಿ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನುz್ದÉÃಶಿಸಿ ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ ಮಾತನಾಡಿದರು. ಡಾ.ಕೆ.ಪಿ.ಅಂಶುಮAತ್, ಎಂ.ಎಲ್ಲೇಶ್, ಎಂ.ಸಿ.ಶಿವಾನAದ ಸ್ವಾಮಿ, ಎಚ್.ಪಿ.ಮಂಜೇಗೌಡ, ರವೀಶ್ ಕ್ಯಾತನಬೀಡು ಮತ್ತಿತರರಿದ್ದರು. 
ಜಿಲ್ಲೆ

ಕಾಂಗ್ರೆಸ್‌ಗೆ ದಲಿತ ಸಮುದಾಯವೇ ದೊಡ್ಡ ಶಕ್ತಿ

ಚಿಕ್ಕಮಗಳೂರು: ಭಾರತದಲ್ಲಿ ದಲಿತ ಸಮುದಾಯವೇ ಕಾಂಗ್ರೆಸ್‌ಗೆ ದೊಡ್ಡಶಕ್ತಿ. ಜಗತ್ತಿನಲ್ಲಿ ಸೂರ್ಯ-ಚಂದ್ರ ಹಾಗೂ ದಲಿತ ಸಮಾಜ ಇರುವವರೆಗೆ ಯಾರಿಂದಲೂ ಕಾಂಗ್ರೆಸ್ ಪಕ್ಷ ಅಲುಗಾಡಿಸಲು ಸಾಧ್ಯವಿಲ್ಲ. ಒಂದು ವೇಳೆ ಪರಿಶಿಷ್ಟ ಸಮಾಜ ಇಲ್ಲವಾದರೆ ಪಕ್ಷವು ನಶಿಸಲಿದೆ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆರ್.ಧರ್ಮಸೇನಾ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಿಲ್ಲಾ ಎಸ್‌ಸಿ ಘಟಕದಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನುz್ದೆÃಶಿಸಿ ಮಾತನಾಡಿದ ಅವರು, ವಿಪಕ್ಷಗಳ ಮಾತು ಹಾಗೂ ಮಂಕುಬೂದಿಗೆ ಬೇರಗಾಗದೆ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಅತಿಹೆಚ್ಚು ದಲಿತ ಸಮಾಜ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಬಹುಸಂಖ್ಯಾತ ದಲಿತರು ಮುಂಚೂಣಿಗೆ ಬರಲು ಸಾಧ್ಯ. ಆ ನಿಟ್ಟಿನಲ್ಲಿ ಮುಂದಿನ ಚುನಾವಣೆಗಳಲ್ಲಿ ಜನಾಂಗ ಕಾಂಗ್ರೆಸ್‌ನತ್ತ ಒಲವು ಹೊಂದಬೇಕು ಎಂದು ಹೇಳಿದರು.

ರಾಷ್ಟçದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅವಮಾನಿಸಿರುವ ವಕೀಲನನ್ನು ಬಿಜೆಪಿ ಪರೋಕ್ಷವಾಗಿ ಬೆಂಬಲಿಸುತ್ತಿದೆ. ಅದೇ ರಾಜ್ಯದಲ್ಲಿ ಉಪಮುಖ್ಯಮಂತ್ರಿಗಳು ಶಾಸಕರಿಗೆ ಕರಿಟೋಪಿ ಎಂದಾಕ್ಷಣ ರಾಷ್ಟçಭಕ್ತಿ ಉಕ್ಕಿ ಹರಿಯುತ್ತಿದೆ. ಆದರೆ ನ್ಯಾಯಾಧೀಶರ ವಿಚಾರದಲ್ಲಿ ಬಿಜೆಪಿಗರ ಮಾತನಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಬಿಜೆಪಿ, ಅಧಿಕಾರಕ್ಕಾಗಿ ಇವಿಎಂ ಮೂಲಕ ಮತಗಳ್ಳತನ ಮಾಡಿದೆ. ಇದರ ವಿರುದ್ಧ ರಾಹುಲ್ ಗಾಂಧಿ ಬೃಹತ್‌ಮಟ್ಟದಲ್ಲಿ ಚಳವಳಿ ರೂಪಿಸಿ ಸತ್ಯಾಸತ್ಯತೆ ಜನರ ಮುಂದಿಡಲು ಪ್ರಯತ್ನಿಸುತ್ತಿದ್ದಾರೆ. ಮತಗಳ್ಳನದಲ್ಲಿ ಚುನಾವಣಾ ಆಯೋಗ, ಅಧಿಕಾರಿ ವೃಂದ ಹಾಗೂ ರಾಜಕೀಯ ಕುತಂತ್ರಿಗಳು ಭಾಗಿಯಾಗಿದ್ದು, ಇವರಿಗೆ ತಕ್ಕ ಪಾಠ ಕಲಿಸಲು ಜನತೆ ಧೈರ್ಯದಿಂದ ರಾಹುಲ್‌ಗಾಂಧಿ ಅವರ ಕೈಬಲಪಡಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮAತ್ ಮಾತನಾಡಿ, ಅಂಬೇಡ್ಕರ್ ಸಂವಿಧಾನದಡಿ ಕಾಂಗ್ರೆಸ್ ಪಕ್ಷ ಕಟಿಬದ್ಧವಾಗುವ ಜೊತೆಗೆÀ ಗೌರವಿಸುವ ಕೆಲಸ ಮಾಡಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ಆರೋಗ್ಯ ಸವಲತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಪರಿಣಾಮ ಇಂದು ರಾಷ್ಟç ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ವಿಚಾರದಲ್ಲಿ ಸ್ಥಳೀಯರಿಗೆ ಸಮಸ್ಯೆಯಿದೆ. ಈ ಬಗ್ಗೆ ಐದು ಕ್ಷೇತ್ರದ ಶಾಸಕರು, ಉಸ್ತುವಾರಿ ಸಚಿವರು ಸಂಬAಧಿಸಿದ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿವೇಶನ ಕೊಡುವ ವ್ಯವಸ್ಥೆ ಕಲ್ಪಿಸಿದ್ದು ಇನ್ನುಳಿದಂತೆ ಜಿಲ್ಲೆಗಳಿಗೆ ತಾಂತ್ರಿಕ ದೋಷ ದಿಂದ ಹಿನ್ನೆಡೆಯಾಗಿದೆ. ಶೀಘ್ರವೇ ಸಮಸ್ಯೆ ಪರಿಹರಿಸಿ ಮೂಲನಿವಾಸಿಗೆ ಭೂಮಿ ಒದಗಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮೂಲ ಕಾರಣವೇ ದಲಿತ ಸಮುದಾಯ. ಹೀಗಾಗಿ ಆ ಸಮುದಾಯಕ್ಕೆ ಸಮಾನ ಅವಕಾಶ ಹಾಗೂ ಅಧಿಕಾರ ನೀಡಬೇಕು. ಆಗ ಮಾತ್ರ ಕಾರ್ಯಕರ್ತರು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಉತ್ಸುಕರಾಗಿ ಕೆಲಸ ಮಾಡುತ್ತಾರೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಮುಖಂಡರಾದ ತನೋಜ್‌ನಾಯ್ಡು, ಹಿರೇಮಗಳೂರು ರಾಮಚಂದ್ರ, ಲಕ್ಷö್ಮಣ್ ಮತ್ತಿತರರಿದ್ದರು.