ಚಿತ್ರದುರ್ಗ: ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಸೋಲು ಅನಿರೀಕ್ಷಿತವೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಂದ್ರಪ್ಪ ಅವರು ಅನ್ಯ ಪಕ್ಷದವರೂ ಮೆಚ್ಚುವಂತಹ ಗುಣ ಸ್ವಭಾವದವರು. ಈ ಬಾರಿ ಪರಾಭವದ ನಿರೀಕ್ಷೆ ಇರಲಿಲ್ಲ. ನಾವೆಲ್ಲರೂ ಒಗ್ಗೂಡಿ ಪ್ರಚಾರ ನಡೆಸಿದ್ದೆವು. ಜತೆಗೆ ಸರ್ಕಾರದ ಸಾಧನೆಗಳಿದ್ದವು. ಇಂತಹ ಸಂದರ್ಭ ಆಗಿರುವ ಸೋಲಿನಿಂದ ಮುಖಂಡರು, ಕಾರ್ಯಕರ್ತರಿಗೆ ನೋವಾಗಿರುವುದು ಸಹಜ. ಯಾರೂ ಎದೆಗುಂದುವ ಅವಶ್ಯಕತೆ ಇಲ್ಲ. 6 ಲಕ್ಷಕ್ಕೂ ಅಧಿಕ ಮತಗಳು ಚಂದ್ರಪ್ಪ ಅವರಿಗೆ ಬಂದಿದೆ ಎಂದು ತಿಳಿಸಿದ್ದಾರೆ.