ವಕ್ಫ್​ ಅಕ್ರಮ ವಿರೋಧಿಸಿ ಭಾಲ್ಕಿಯಲ್ಲಿ ಸೋಮವಾರ ಮಾಜಿ ಶಾಸಕ ಪ್ರಕಾಶ ಖಂಡ್ರೆ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿತು. ತಾಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಪ್ರಮುಖರಾದ ಶಿವರಾಜ ಗಂದಗೆ, ಗೋವಿಂದರಾವ ಬಿರಾದಾರ, ಕಿರಣ ಖಂಡ್ರೆ, ಚನ್ನಬಸವಣ್ಣ ಬಳತೆ ಇತರರಿದ್ದರು. 
ಜಿಲ್ಲೆ

ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ

ಭಾಲ್ಕಿ: ಪಟ್ಟಣದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ವಕ್ಫ್ಅಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ತಾಲೂಕಿನಲ್ಲಿ ಸುಮಾರು ೮೦೦ ವರ್ಷ ಇತಿಹಾಸದ ರಾಮೇಶ್ವರ ಟೇಕಣಿ ಜಮೀನನ್ನು ತನ್ನದೆಂದು ವಕ್ಫ್ ಬೋರ್ಡ್ ನೋಟಿಸ್ ನೀಡಿದೆ ಎಂದು ದೂರಿದರು.

ಪಟ್ಟಣ ರೈತರ ಸುಮಾರು ೫೨೬ ಎಕರೆ ಹಾಗೂ ಧನ್ನೂರ(ಎಚ್), ಲಾಧಾ, ಲಖನಗಾಂವ, ತೆಲಗಾಂವ, ಕೋನಮೇಳಕುಂದಾ, ಕೇಸರಜವಳಗಾ, ನಿಟ್ಟೂರ(ಬಿ), ಮೇಹಕರ್, ಗೋಧಿಹಿಪ್ಪರ್ಗಾ, ಗೋರಚಿಂಚೋಳಿ ಸೇರಿ ವಿವಿಧ ಗ್ರಾಮಗಳ ೯೬೮ ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ವೀರಣ್ಣ ಕಾರಬಾರಿ, ಪ್ರಮುಖರಾದ ಶಿವರಾಜ ಗಂದಗೆ, ಗೋವಿಂದರಾವ ಬಿರಾದಾರ, ಕಿರಣ ಖಂಡ್ರೆ, ಚನ್ನಬಸವಣ್ಣ ಬಳತೆ, ಶಿವು ಲೋಖಂಡೆ, ರಾಜಕುಮಾರ ದಾಡಗಿ, ಶಿವಕುಮಾರ ಸಜ್ಜನ್, ಮನ್ಮಥ ಸ್ವಾಮಿ, ಡಾ.ಜಗದೀಶ ಭೂರೆ, ಪಾಂಡುರಂಗ ಕನಸೆ, ಶರದ ದುರ್ಗಳೆ, ಕಿಶನರಾವ ಪಾಟೀಲ್ ಇಂಚೂರಕರ್, ಕೆ.ಡಿ. ಗಣೇಶ, ಬಾಬುರಾವ ಧೂಪೆ, ವೆಂಕಟರಾವ, ಡಿಗಂಬರರಾವ ಮಾನಕಾರಿ ಪಾಲ್ಗೊಂಡಿದ್ದರು.